Advertisement

ಹುತಾತ್ಮ ಮೇಜರ್‌ ಪತ್ನಿ ಈಗ ಲೆಫ್ಟಿನೆಂಟ್‌! ಪತಿ ಕೌಸ್ತುಭ್‌ ಕನಸು ಈಡೇರಿಸಿದ ಕನ್ನಿಕಾ

08:33 PM Nov 24, 2020 | sudhir |

ಚೆನ್ನೈ: “ನಾನು ನನ್ನ ಜೀವಮಾನದಲ್ಲಿ 100 ಮೀಟರ್‌ ದೂರ ಓಡಿದವಳೇ ಅಲ್ಲ. ಆದರೆ, ಸೇನೆಗೆ ಸೇರಿದ ಮೇಲೆ ಈಗ 40 ಕಿ.ಮೀ. ಓಡುತ್ತಿದ್ದೇನೆ!’

Advertisement

ಕಾಶ್ಮೀರದಲ್ಲಿ ಉಗ್ರರ ಗುಂಡುಗಳಿಗೆ ಎದೆಗೊಟ್ಟು ವೀರಮರಣ ಅಪ್ಪಿದ ಮೇಜರ್‌ ಕೌಸ್ತುಭ್‌ ಪತ್ನಿ ಕನ್ನಿಕಾ ರಾಣೆ ಅವರ ಸ್ಫೂರ್ತಿದಾಯಕ ಮಾತುಗಳಿವು! ಅಂದಹಾಗೆ, 30 ವರ್ಷದ ಈಕೆ ಈಗ ಸೈನ್ಯದಲ್ಲಿ ಲೆಫ್ಟಿನೆಂಟ್‌! ಈ ಹುದ್ದೆಗೆ ಆಯ್ಕೆಯಾಗುವ ಮೂಲಕ ಕನ್ನಿಕಾ, ಪತಿಯ ಆಸೆ ಈಡೇರಿಸಿದ್ದಾರೆ.

ಸಾಹಸಗಾಥೆ: ಮೇಜರ್‌ ಕೌಸ್ತುಭ್‌ ಕಾಶ್ಮೀರದಲ್ಲಿ ಹುತಾತ್ಮರಾದಾಗ ಮಹಾರಾಷ್ಟ್ರದ ಭಯಾಂಡರ್‌ ಪಾಲಿಕೆ ಕನ್ನಿಕಾ ಅವರಿಗೆ ಕೈತುಂಬಾ ಸಂಬಳವುಳ್ಳ ಉದ್ಯೋಗದ ಆಫ‌ರ್‌ ನೀಡಿತ್ತು. ಆದರೆ, ಅದನ್ನು ನಿರಾಕರಿಸಿದ ಕನ್ನಿಕಾ ಛಲಬಿಡದ ತ್ರಿವಿಕ್ರಮನಂತೆ ದೈಹಿಕವಾಗಿ ಫಿಟ್‌ ಆಗುವತ್ತ ಗಮನ ನೆಟ್ಟರು. “ಹುತಾತ್ಮ ಯೋಧರ ಪತ್ನಿಯರ ಶ್ರೇಣಿ’ಯಲ್ಲಿ ಸರ್ವೀಸ್‌ ಸೆಲೆಕ್ಷನ್‌ ಬೋರ್ಡ್‌ (ಎಸ್‌ಎಸ್‌ಬಿ) ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸ್‌ ಮಾಡಿ, ಸೇನೆಗೆ ಪ್ರವೇಶ ಪಡೆದರು.

ಇದನ್ನೂ ಓದಿ: ಮೂಡುಬಿದ್ರೆ ಶಾಂಭವಿ ನದಿಯಲ್ಲಿ ನಾಲ್ವರು ಮುಳುಗಿದ ಪ್ರಕರಣ : ಇಬ್ಬರ ಮೃತದೇಹ ಪತ್ತೆ

“49 ವಾರಗಳ ಕಠೊರ ತರಬೇತಿ ಮುಗಿಸಿ ಈ ಹುದ್ದೆಗೆ ಏರಿದ್ದೇನೆ. ದೈಹಿಕ ಸಹಿಷ್ಣುತೆಯನ್ನು ಜೀವನಸ್ಫೂರ್ತಿ, ದೃಢ ನಿಶ್ಚಯ, ಸ್ಥಿತಿಸ್ಥಾಪಕತ್ವ ಮಾರ್ಗದಿಂದ ಮಾತ್ರ ಮೈಗೂಡಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ಕನ್ನಿಕಾ.

Advertisement

ಅತ್ತೆ ಮೆಚ್ಚುಗೆ: ಚೆನ್ನೈನ ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿ (ಒಟಿಎ) 230 ಕೇಡೇಟ್‌ಗಳೊಂದಿಗೆ ಕನ್ನಿಕಾ ಪದಗ್ರಹಣ ಸ್ವೀಕರಿಸಿದ್ದಾರೆ. ಸೊಸೆಯನ್ನು ಸೇನೆಯ ಯೂನಿಫಾರಂನಲ್ಲಿ ನೋಡಲು ಹಂಬಲಿಸುತ್ತಿದ್ದ ಅತ್ತೆ ಜ್ಯೋತಿ, “ಕನ್ನಿಕಾಳ ಪದಗ್ರಹಣ ನನ್ನ ಪುತ್ರ ಕೌಸ್ತುಭ್‌ನ 2011ರ ಸಮಾರಂಭವನ್ನು ನೆನಪಿಸಿತು’ ಎಂದು ಹೆಮ್ಮೆಪಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next