Advertisement

ಧೋನಿ, ರೋಹಿತ್‌ರನ್ನು ಹಿಂದಿಕ್ಕಿದ ಮಾರ್ಟಿನ್‌ ಗಪ್ಟಿಲ್‌

12:30 AM Jan 04, 2019 | |

ಮೌಂಟ್‌ ಮಾಂಗಾನುಯಿ: ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ (138 ರನ್‌) ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. 

Advertisement

ಮಾತ್ರವಲ್ಲ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 6 ಸಾವಿರ ರನ್‌ ಗಡಿ ದಾಟಿ ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿ ಹಾಗೂ ರೋಹಿತ್‌ ಶರ್ಮ ದಾಖಲೆಯನ್ನು ಮುರಿದಿದ್ದಾರೆ. ಒಟ್ಟಾರೆ ಕಿವೀಸ್‌ನ  6ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 157 ಇನಿಂಗ್ಸ್‌ಗಳಲ್ಲಿ ಗಪ್ಟಿಲ್‌ 6 ಸಾವಿರ ರನ್‌ ಪೂರೈಸಿದ್ದಾರೆ. ರೋಹಿತ್‌ ಶರ್ಮ 162 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ ಧೋನಿ 166 ಇನಿಂಗ್ಸ್‌ಗಳಲ್ಲಿ ಮಾಡಿದ್ದರು. ದಕ್ಷಿಣ ಆಫ್ರಿಕಾದ ಹಾಶೀಮ್‌ ಆಮ್ಲ (123 ಇನಿಂಗ್ಸ್‌) ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್‌ ಕೊಹ್ಲಿ (136 ಇನಿಂಗ್ಸ್‌) ಎರಡನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next