Advertisement
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯು ಭಾರತದ ಆದಿಕವಿ ಎಂದೇ ಹೆಸರಾಗಿದ್ದಾರೆ. ಇವರು ರಚಿಸಿದ ರಾಮಾಯಣವು ಬಹುತೇಕ ಭಾರತೀಯರು ಅಧ್ಯಯನ ಮಾಡಿದ್ದಾರೆ. ರಾಮಾಯಣ ರಚನೆಯಲ್ಲಿ ವಾಲ್ಮೀಕಿಯವರು ತೋರಿದ ಮಾರ್ಗ, ದೃಷ್ಟಿಕೋನ, ವೈಚಾರಿಕ ನೆಲೆಗಟ್ಟು ವಿಶಿಷ್ಟವಾಗಿದೆ ಎಂದರು.
Related Articles
Advertisement
ವಾಲ್ಮೀಕಿ ಭವನ ಕಾಮಗಾರಿ ಆರಂಭಿಸಿ :
ಬೀದರ: ನಗರದಲ್ಲಿ ನನೆಗುದಿಗೆ ಬಿದ್ದಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಟ್ಟಡ ಕಾಮಗಾರಿಗೆ ಶೀಘ್ರ ಆರಂಭಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘ ಮನವಿ ಮಾಡಿದೆ.
ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್, ಯುವ ಘಟಕದ ಅಧ್ಯಕ್ಷ ಸುನೀಲ ಭಾವಿಕಟ್ಟಿ ನೇತೃತ್ವದಲ್ಲಿ ಪ್ರಮುಖರು ಡಿಸಿ ಅವರನ್ನು ಭೇಟಿ ಮಾಡಿ ಸಮಾಜ ಕಲ್ಯಾಣ ಸಚಿವರಿಗೆ ಬರೆದ ಪತ್ರ ಸಲ್ಲಿಸಿದರು. ಟೋಕರೆ ಕೋಲಿ ಸಮಾಜದ ಆರಾಧ್ಯ ಗುರು ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ 2010-11ರಲ್ಲಿ 1 ಕೋಟಿ ರೂ. ಮಂಜೂರು ಮಾಡಿ, 2011ರ ಮಾ.
22ಕ್ಕೆ ಮೊದಲನೇಯ ಕಂತಾಗಿ 25 ಲಕ್ಷ ರೂ.
ಬಿಡುಗಡೆ ಸಹ ಮಾಡಲಾಗಿದೆ. ಆದರೆ, ಈವರೆಗೆ ಅಧಿಕಾರಿಗಳು ಕಟ್ಟಡದ ಕಾಮಗಾರಿ ಶುರು ಮಾಡದೇ ಜಿಲ್ಲೆಯ ಎಸ್.ಟಿ. ಸಮುದಾಯದ ಜನರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಗರದ ಚಿಕ್ಕಪೇಟ್ ಸಮೀಪ ಸಮುದಾಯ ಭವನ ನಿರ್ಮಾಣಕ್ಕಾಗಿ 20 ಗುಂಟೆ ಭೂಮಿ ನೀಡಲಾಗಿದೆ. ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಅವರು ಶಂಕುಸ್ಥಾಪನೆ ನೆರವೇರಿಸಿ ಎರಡು ವರ್ಷ ಕಳೆಯುತ್ತಿದ್ದರೂ ಇಲ್ಲಿಯವರೆಗೆ ಕಟ್ಟಡ ಕಾಮಗಾರಿ ಶುರು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ನ. 15ರೊಳಗೆ ಭವನ ನಿರ್ಮಾಣದ ಕೆಲಸಕ್ಕೆ ಚಾಲನೆ ನೀಡಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಮಾರುತಿ ಮಾಸ್ಟರ್, ಶರಣಪ್ಪ ಖಾಶೆಂಪಿರ್, ಶನ್ಮೂಖಪ್ಪಾ ಶೇಕಾಪೂರ, ರವೀಂದ್ರ ಗುಮಾಸ್ತಿ ಇದ್ದರು.