Advertisement

ವಾಲ್ಮೀಕಿ ಮಹರ್ಷಿ ಮಹಾನ್‌ ದಾರ್ಶನಿಕ

08:18 PM Nov 01, 2020 | Suhan S |

ಸೊರಬ: ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್‌ ದಾರ್ಶನಿಕ ಮಹರ್ಷಿ ವಾಲ್ಮೀಕಿಯಾಗಿದ್ದು ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯ ಎಂದು ತಹಶೀಲ್ದಾರ್‌ ಶಿವಾನಂದ ಪಿ. ರಾಣೆ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ವಾಲ್ಮೀಕಿ ಸಮಾಜದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಕುಲಕ್ಕೆ ತನ್ನದೇ ಆದ ಕೊಡುಗೆ ನೀಡಿದ ಮಹಾನ್‌ ಚೇತನ ವಾಲ್ಮೀಕಿ. ಇಡೀ ವಿಶ್ವಕ್ಕೆರಾಮಾಯಣದಂತಹ ಮಹಾನ್‌ ಗ್ರಂಥವನ್ನು ನೀಡಿದ ಕೊಡುಗೆ ಅವರದ್ದಾಗಿದ್ದು ರಾಮಾಯಣವು ಜನರ ಮನದಲ್ಲಿ ಮನೆ ಮಾಡುವಂತಹ ಸುಂದರವಾದ ಮಹಾಕಾವ್ಯ. ಹಿಂದೂ ಧರ್ಮ ಪವಿತ್ರ ಗ್ರಂಥ ರಚಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಸಹಾಯಕ ಪ್ರಾಧ್ಯಾಪಕ ಪ್ರೊ| ಜೆ.ಎಸ್‌. ಶಂಕರ ನಾಯ್ಕ ಉಪನ್ಯಾಸ ನೀಡಿ, ವಾಲ್ಮೀಕಿ ರಚಿಸಿದ ರಾಮಾಯಣವನ್ನು ಆಧರಿಸಿ ಜಗತ್ತಿನಲ್ಲಿ ಅನೇಕ ರಾಮಾಯಣಗಳ ಉಗಮವಾಗಿದೆ. ಕೇವಲ ಆಧ್ಯಾತ್ಮಿಕ ದೃಷ್ಟಿಯಿಂದ ರಾಮಾಯಣವನ್ನು ನೋಡದೇ, ಮುಂದಿನ ತಲೆಮಾರಿಗೆ ಉತ್ತಮ ಸಂದೇಶಗಳನ್ನು ನೀಡಬೇಕು. ಅದರಲ್ಲಿನ ಸಹೋದರ ಮೌಲ್ಯಕ್ಕೆ ಅತ್ಯಂತ ಮಹತ್ವದ್ದು ಎಂದರು.

ವಾಲ್ಮೀಕಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಾಲ್ಮೀಕಿ ಸಮಾಜದ ಎಂ.ಎಚ್‌. ಸುಪ್ರಿಯಾ, ಎನ್‌. ಸೋನಾ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಬಿ. ಭೂಮಿಕಾ, ಎಲ್‌.ವಿ. ಸುನೀತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್‌. ಪ್ರವೀಣ, ಶಿರಸ್ತೇದಾರ್‌ ಎಸ್‌. ವಿಜಯ್‌, ಪಪಂ ಪ್ರಭಾರ ಮುಖ್ಯಾಧಿಕಾರಿ ಶಲ್ಜ ನಾಯ್ಕ, ಸಿಡಿಪಿಒ ಇಂದಿರಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್‌, ಡಿಎಸ್‌ ಎಸ್‌ ಜಿಲ್ಲಾ ಉಪಾಧ್ಯಕ್ಷ ಶಾಮಣ್ಣ ತುಡನೂರು, ತಾಲೂಕು ಅಧ್ಯಕ್ಷ ಶಿವಾಜಿ ಜಡೆ, ಪುರುಷೋತ್ತಮ, ಹಸ್ವಿ ಮಂಜಪ್ಪ, ಖಲಂದರ್‌ ತಲಗಡ್ಡೆ, ವಾಲ್ಮೀಕಿ ಸಮಾಜದ ಟೌನ್‌ ಮುಖಂಡ ಹನುಮಂತಪ್ಪ ಇತರರಿದ್ದರು. ಎಸ್‌. ಸಮೀಕ್ಷಾ ಪ್ರಾರ್ಥಿಸಿ, ಶಂಕರ್‌ ವಂದಿಸಿ, ಕೆ. ಶಿವಪ್ಪ ನಿರೂಪಿಸಿದರು.

Advertisement

ಮಹರ್ಷಿ ವಾಲ್ಮೀಕಿ ತತ್ವಾದರ್ಶ ಅಳವಡಿಸಿಕೊಳ್ಳಿ :

 ಭದ್ರಾವತಿ: ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಜಗತ್ತಿನ ಮಹಾನ್‌ ಗ್ರಂಥವಾಗಿದ್ದು ಇದು ನಾವೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್‌ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅವರ ಆದರ್ಶ, ತತ್ವ- ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿ ಅರ್ಥಪೂರ್ಣವಾಗಿ ಅಚರಿಸಿದಂತಾಗುತ್ತದೆ. ವಾಲ್ಮೀಕಿ ವಿರಚಿತವಾದ ರಾಮಾಯಣ ಮಹಾಗ್ರಂಥ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರದೆ, ಎಲ್ಲರಿಗೂ ಮಾನ್ಯವಾದ ಪವಿತ್ರ ಗ್ರಂಥವಾಗಿದೆ. ತಾಲೂಕಿನ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯವಿದ್ದು, ಸರ್ಕಾರದಿಂದ ಹಣ ಬಿಡುಗಡೆ ಮಾಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ವಾಲ್ಮೀಕಿ ಜಯಂತಿಯ ಅಂಗವಾಗಿ ಅಂಡರ್‌ ಬ್ರಿಡ್ಜ್ ಬಳಿಯಿರುವ ಅಂಬೇಡ್ಕರ್‌ ವೃತ್ತದಲ್ಲಿನ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಗ್ರೇಡ್‌ 2 ತಹಶೀಲ್ದಾರ್‌ ರಂಗಮ್ಮ, ಸಮಾಜ ಕಲ್ಯಾಣ ಇಲಾಖೆಯ ದೂದ್‌ಪೀರ್‌, ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ವಾಲ್ಮೀಕಿ ನಾಯಕ ಸಮಾಜದ ನಗರ ಅಧ್ಯಕ್ಷ ಬಸವರಾಜ್‌, ಗಂಗಾಧರ್‌, ಪ್ರಶಾಂತ್‌ ಪ್ರೇಮ್‌ಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next