ಲಕ್ನೋ: ಉತ್ತರ ಪ್ರದೇಶದ ಜೈಲಿನಲ್ಲಿರುವ ಮಹಿಳಾ ಕೈದಿಗಳಿಗೆ ಜೈಲಿನೊಳಗೆ ಮಂಗಳಸೂತ್ರ ಧರಿಸುವುದಕ್ಕೆ ಅವಕಾಶ ನೀಡಲು ಸರ್ಕಾರ ಸಿದ್ಧವಾಗಿದೆ.
1941ರಲ್ಲಿ ಮಾಡಲಾಗಿರುವ ಜೈಲು ನಿಯಮಗಳಿಗೆ ಇದೇ ಮೊದಲನೇ ಬಾರಿಗೆ ಸರ್ಕಾರ ತಿದ್ದುಪಡಿ ತಂದಿದ್ದು, ಅದಕ್ಕೆ ರಾಜ್ಯದ ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ಮಹಿಳಾ ಕೈದಿಗಳಿಗೆ ಈವರೆಗೆ ಬಳೆ, ಗೆಜ್ಜೆ ಮತ್ತು ಮೂಗುಬೊಟ್ಟು ಹಾಕುವುದಕ್ಕೆ ಮಾತ್ರವೇ ಅವಕಾಶವಿತ್ತು. ಆದರೆ ಇನ್ನುಮುಂದೆ ಮಂಗಳಸೂತ್ರ ಧರಿಸುವುದಕ್ಕೂ ಅವಕಾಶವಿರಲಿದೆ.
ಹಾಗೆಯೇ ಅವರು ಕರ್ವಾ ಚೌತ್, ತೀಜ್‌ನಂತಹ ಹಬ್ಬಗಳನ್ನು ಆಚರಿಸುವುದಕ್ಕೂ ಅವಕಾಶ ಮಾಡಿಕೊಡಲಾಗುವುದು.
ದೀಪಾವಳಿ, ಗಣೇಶ ಚತುರ್ಥಿಯಂತಹ ಹಬ್ಬಗಳಲ್ಲಿ ಖೀರ್ ಅನ್ನು ಕೊಡಲಾಗುವುದು, ಮುಸ್ಲಿಂ ಕೈದಿಗಳಿಗೆ ರಂಜಾನ್ ಉಪವಾಸಕ್ಕೆ ಅವಕಾಶವನ್ನೂ ಕೊಡಲಾಗುವುದು. ಇದೇ ರೀತಿ ಮಾನವೀಯ ದೃಷ್ಟಿಯಲ್ಲಿ ಹಲವಾರು ನಿಯಮ ಬದಲಾವಣೆಗಳನ್ನು ಜೈಲಿನಲ್ಲಿ ತರುವುದಕ್ಕೆ ರಾಜ್ಯ ಸರ್ಕಾರ ಒಪ್ಪಿದೆ.