ಮಂಗಳೂರು: ನಗರದ ಜೆಪ್ಪು ಕುಡುಪ್ಪಾಡಿ ನಿವಾಸಿ ಸಲೀಮಾ (27) ನಾಪತ್ತೆಯಾಗಿರುವ ಬಗ್ಗೆ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೋಳಂತೂರು ನಿವಾಸಿ ಎಸ್.ಪಿ. ಶರೀಫ್ ಅವರು ಸಲೀಮಾ ಅವರನ್ನು 9 ವರ್ಷಗಳ ಹಿಂದೆ ಮದುವೆಯಾಗಿದ್ದು ಮೂರು ಮಕ್ಕಳಿದ್ದಾರೆ. ಸಲೀಮ ಅವರು ಹೆಚ್ಚಾಗಿ ತಾಯಿ ಮನೆಯಲ್ಲಿ ವಾಸವಾಗಿದ್ದರು. ಶರೀಫ್ ಅವರು ಮೇ 2ರಂದು ಮಕ್ಕಳೊಂದಿಗೆ ಸಲೀಮ ಅವರನ್ನು ಭೇಟಿಯಾಗಲು ಬಂದಾಗ ಅಲ್ಲಿ ಆಕೆ ಇರಲಿಲ್ಲ. ಆಕೆಯ ತಾಯಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಒಂದು ತಿಂಗಳ ಹಿಂದೆಯೇ ಮನೆಯಿಂದ ಹೋಗಿರುವುದಾಗಿ ತಿಳಿಸಿದ್ದು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. 5 ಅಡಿ ಎತ್ತರವಿದ್ದು ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಿ ಭಾಷೆ ಮಾತನಾಡುತ್ತಾರೆ. ಈಕೆ ಪತ್ತೆಯಾದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಯವರು ಪ್ರಕಟನೆಯಲ್ಲಿ ಕೋರಿದ್ದಾರೆ.
ಕುದ್ರೋಳಿ ನಿವಾಸಿ ಮೂಲತಃ ಬಾಗಲಕೋಟೆಯ ವ್ಯಕ್ತಿ ನಾಪತ್ತೆ
ಮಂಗಳೂರು: ಕುದ್ರೋಳಿಯಲ್ಲಿ ವಾಸವಾಗಿರುವ, ಮೂಲತಃ ಬಾಗಲಕೋಟೆಯ ನಿವಾಸಿ ಹನಮಂತ (39) ನಾಪತ್ತೆಯಾಗಿರುವುದಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹನುಮಂತ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಹೆಲ್ಪರ್ ಕಾರ್ಮಿಕನಾಗಿ ದುಡಿಯುತ್ತಿದ್ದು ಪತ್ನಿ ಕುದ್ರೋಳಿ ಪರಿಸರದಲ್ಲಿ ಮನೆ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಮೂರು ಮಕ್ಕಳಿದ್ದು ಕುದ್ರೋಳಿಯಲ್ಲಿ ಜೋಪಡಿಯಲ್ಲಿ ವಾಸವಾಗಿದ್ದಾರೆ.
ಪತ್ನಿ ಆಕೆಯ ಸ್ವಂತ ಊರಾದ ಅಮೀನಗಡಕ್ಕೆ ಜಾತ್ರೆಯ ನಿಮಿತ್ತ ಒಂದು ತಿಂಗಳ ಹೋಗಿದ್ದು ಹನಮಂತ ಕೂಡ 15 ದಿನಗಳ ಬಳಿಕ ಬಾಗಲಕೋಟೆಗೆ ತೆರಳಿ ವಾಪಸ್ಸಾಗಿದ್ದರು. ಜೂ. 3ರಂದು ಹನುಮಂತ ಪತ್ನಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು ಆ ಬಳಿಕ ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ.
ವಾಸ್ತವ್ಯವಿದ್ದ ಪಕ್ಕದ ಜೋಪಡಿಯವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದು ಜೋಪಡಿಯಲ್ಲಿ ಇಲ್ಲ ಎಂದು ತಿಳಿಸಿದ್ದರು. ಪತ್ನಿ ಜೂ. 10ರಂದು ಊರಿನಿಂದ ಮಂಗಳೂರಿಗೆ ಬಂದು ಹುಡುಕಾಡಿದ್ದು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹನುಮಂತ 5.3 ಅಡಿ ಎತ್ತರವಿದ್ದು ಕಪ್ಪು ಬಣ್ಣ, ಉರುಟು ಮುಖ ಹೊಂದಿದ್ದಾರೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾರೆ.
ಹೊಟ್ಟೆಯ ಬಳಿ ಶಸ್ತ್ರಚಿಕಿತ್ಸೆ ಮಾಡಿದ ಗುರುತು ಇದೆ. ಅವರು
ಪತ್ತೆಯಾದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಯವರು ಪ್ರಕಟನೆಯಲ್ಲಿ ಕೋರಿದ್ದಾರೆ.
ಚೆನ್ನೈಗೆ ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ
ಮಲ್ಪೆ: ಕೆಲಸದ ನಿಮಿತ್ತ ಚೆನ್ನೈಗೆಂದು ಹೋದ ಕಲ್ಮಾಡಿ ಬಿಲ್ಲುಗುಡ್ಡೆಯ ಯೋಗೀಶ್ ಕುಂದರ್ (36) ವಾಪಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 27ರಂದು ಮನೆಯಿಂದ ಹೋದವರು ಜೂ. 3ರಂದು ಕರೆಮಾಡಿ ಈ ದಿನ ನನಗೆ ಬರಲು ಸಾಧ್ಯವಾಗುವುದಿಲ್ಲ.
ಆದಷ್ಟು ಬೇಗ ಬರುತೇ¤ನೆ ಎಂದು ತಿಳಿಸಿರುತ್ತಾರೆ. ಆ ಬಳಿಕ ಯಾವುದೇ ಕರೆ ಬಂದಿಲ್ಲ. ಕರೆ ಮಾಡಿದಾಗಿ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.