Advertisement

Married ಮುಸ್ಲಿಮರಿಗೆ ಲಿವ್‌ ಇನ್‌ ಸಂಬಂಧ ಹಕ್ಕು ಇಲ್ಲ: ಹೈಕೋರ್ಟ್‌

01:05 AM May 10, 2024 | Team Udayavani |

ಹೊಸದಿಲ್ಲಿ: ಸಂಗಾತಿ ಬದುಕಿದ್ದಾಗಲೇ ವಿವಾಹಿತ ಮುಸ್ಲಿಮರಿಗೆ ಸಹಜೀವನ ಸಂಬಂಧ(ಲಿವ್‌-ಇನ್‌ ರಿಲೇಶನ್‌ಶಿಪ್‌) ಹೊಂದುವ ಹಕ್ಕಿಲ್ಲ. ಯಾಕೆಂದರೆ ಇಸ್ಲಾಂ ಮತತಣ್ತೀಗಳಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ನ ಲಕ್ನೋ ಪೀಠ ಹೇಳಿದೆ. ಹಾಗಿದ್ದೂ, ಅವಿವಾಹಿತರಾದ ಇಬ್ಬರು ಅಥವಾ ವಯಸ್ಕರಾದವರು ತಮ್ಮ ಇಷ್ಟದ ರೀತಿಯಲ್ಲಿ ಲಿವ್‌ ಇನ್‌ ಸಂಬಂಧ ಹೊಂದಬಹುದು ಎಂದು ಹೇಳಿದೆ.

Advertisement

ಮೊಹಮ್ಮದ್‌ ಶದಾಬ್‌ ಖಾನ್‌ ಜತೆ ಸಹ ಜೀವನ ನಡೆಸುತ್ತಿದ್ದ ಸ್ನೇಹಾ ದೇವಿ, ತಮ್ಮ ಕುಟುಂಬ ದವರಿಂದ ಬೆದರಿಕೆ ಇದ್ದು ರಕ್ಷಣೆ ಕೋರಿ ಕೋರ್ಟ್‌ಗೆ ಮೊರೆ ಹೋಗಿದ್ದಳು. ಈ ಕುರಿತು ವಿಚಾರಣೆ ನಡೆಸಿದ ವಿಭಾಗೀಯ ಪೀಠವು, ಖಾನ್‌ 2020ರಲ್ಲಿ ಮದುವೆಯಾಗಿ, ಮಗು ಕೂಡ ಪಡೆದಿದ್ದಾನೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next