Advertisement
ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾನು ಮತ್ತು ನಾರಾಯಣ ಮೂರ್ತಿ ಇಬ್ಬರೂ ನಮ್ಮ ಮದುವೆ ಸರಳವಾಗಿರಬೇಕೆಂದು ನಿರ್ಧರಿಸಿದ್ದೇವು. 1978ರ ಫೆ.10ರಂದು ನಮ್ಮಿಬ್ಬರ ಸೋದರ ಸಂಬಂಧಿಗಳನ್ನು ಮಾತ್ರ ಕರೆದು, ಬಾಡಿಗೆ ಮನೆಯ ಕೋಣೆಯಲ್ಲೇ, ನಮಗೆ ಗೊತ್ತಿದ್ದ ಮಂತ್ರವನ್ನು ನಾವೇ ಹೇಳಿಕೊಂಡು ಮದುವೆಯಾದೆವು. ನಮ್ಮ ಮದುವೆಗೆ ಆದ ಒಟ್ಟು ಖರ್ಚು 800 ರೂಪಾಯಿ. ಅದರಲ್ಲಿ 400 ರೂಪಾಯಿ ನನ್ನದು, ಇನ್ನು 400 ರೂಪಾಯಿ ನಾರಾಯಣ ಮೂರ್ತಿಯವರದ್ದು. ಕರಿಮಣಿ ಸರದಲ್ಲೇ ನನ್ನ ತಾಳಿ ಇತ್ತು. ಇಳಕಲ್ ಸೀರೆಯಷ್ಟೇ ನನ್ನ ಮದುವೆಗೆ ಖರೀದಿಸಿದ್ದು. ಹೆಚ್ಚಿನ ಜನರನ್ನೂ ಕರೆಯಲಿಲ್ಲ. ಹೀಗಾಗಿ ಉಡುಗೊರೆಯೂ ಬರಲಿಲ್ಲ. ಇದನ್ನು ಕಂಡ ಕೆಲವರು ನಮ್ಮನ್ನು ಜುಗ್ಗ ಎಂದರು. ಆದರೂ ನಾವು ಎದೆ ಗುಂದಲಿಲ್ಲ’ ಎಂದು ಸ್ಮರಿಸಿದರು. ಅಲ್ಲದೆ, ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸಾಲಗಾರರಾಗುತ್ತಾರೆ. ಇದರ ಬದಲು ಸರಳ ಮದುವೆ ಮಾಡಿ. ಮದುವೆ ನಂತರ ಬದುಕು ಕಟ್ಟಿಕೊಳ್ಳಲು ಉಪಯೋಗಿಸಿ ಎಂದು ಸಲಹೆ ನೀಡಿದರು. Advertisement
800 ರೂ.ನಲ್ಲಿ ಮದುವೆಯಾದ್ವಿ
01:06 AM Feb 03, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.