ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ 49 ಜೋಡಿಗಳು ಸರಳ ರೀತಿಯಲ್ಲಿ ವಿವಾಹವಾದರು. ಬೆಳಗ್ಗೆ 8.45ರಿಂದ ಆರಂಭವಾದ ವಿವಾಹ ಮುಹೂರ್ತ 1 ಗಂಟೆಯ ತನಕ ನಡೆದಿದೆ. ರವಿವಾರ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು ಸುಮಾರು 6,000 ಜನ ಭೋಜನ ಶಾಲೆಯಲ್ಲಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ.
ಎರಡು ಕೌಂಟರ್ ವ್ಯವಸ್ಥೆ
ವ್ಯವಸ್ಥಿತವಾಗಿ ಮದುವೆ ಮುಹೂರ್ತ ನಡೆ ಯುವ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ನಾಲ್ಕು ಜನ ಅರ್ಚಕ ಪುರೋಹಿತರು ಸಹಿತ ಎರಡು ಕೌಂಟರ್ ಹಾಗೂ ನೋಂದಣಿಗೆ ಪ್ರತ್ಯೇಕ ಸಿಬಂದಿ ನೇಮಕ ಮಾಡಲಾಗಿತ್ತು.
ಮದುವೆ ದಿಬ್ಬಣ ಬಂದ ವಾಹನ ಹಾಗೂ ರವಿ ವಾರ ರಜಾ ದಿನವಾದುದರಿಂದ ಕಟೀಲು ಪೇಟೆ ಹಾಗೂ ರಥಬೀದಿ ಬಸ್ ನಿಲ್ದಾಣದಲ್ಲಿ ವಾಹನಗಳು ತುಂಬಿ ಟ್ರಾಫಿಕ್ ಜಾಮ್ ಉಂಟಾ ಗದಂತೆ ಮುಂಜಾಗ್ರತೆ ಕ್ರಮವಾಗಿ ಕಿನ್ನಿಗೋಳಿ ಕಡೆಯಿಂದ ಬರುವ ವಾಹನ ಗಳಿಗೆ ಕಾಲೇಜು ಮೈದಾನ, ಬಜಪೆ ಮಾರ್ಗವಾಗಿ ಬರುವ ವಾಹನಗಳಿಗೆ ಪ್ರೌಢ ಶಾಲೆಯ ವಠಾರದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.