Advertisement

Kalaburagi: ಕಲಬುರಗಿಯ ಖಂಡೇಶ್ವರ ದೇಗುಲದ ಎದುರು ಮುಸ್ಲಿಂ ಯುವಕನ ಮದುವೆ

11:13 AM Feb 12, 2024 | Team Udayavani |

ಮಾದನಹಿಪ್ಪರಗಿ: ಮುಸ್ಲಿಂ ಕುಟುಂಬವೊಂದು ಮಗನ ಮದುವೆಯನ್ನು ದೇವಾಲ ಯದ ಎದುರು ಮಾಡಿಸಿದ ಘಟನೆ ಕಲಬುರಗಿ ಜಿಲ್ಲೆಯ ಮಾದನ ಹಿಪ್ಪರಗಿಯಲ್ಲಿ ನಡೆದಿದೆ.

Advertisement

ಮಹಿಬೂಬ್‌ ಅಹ್ಮ ದ್‌ ಹಾರಕೂಡ ಎಂಬು ವರ ಪುತ್ರ ಸಿಕಂದರ್‌ ಮದುವೆ ಗ್ರಾಮದ ಖಂಡೇ ಶ್ವರ ಪಾದಗಟ್ಟೆ ಎದುರು ವಿಜೃಂಭಣೆಯಿಂದ ನಡೆದಿದೆ.

ಮದುವೆ ಶಾಸ್ತ್ರ ಮುಸ್ಲಿಂ ಧರ್ಮದ ಪ್ರಕಾರ ನಡೆದಿದ್ದು ಬಿಟ್ಟರೆ ಉಳಿದೆಲ್ಲವೂ ಲಿಂಗಾಯತ ಸಂಪ್ರದಾಯದ ಪ್ರಕಾರ ನಡೆಯಿತು. ಈ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ನೂರಾರು ಮನೆಗಳಿವೆ. ಇಲ್ಲಿಯವರೆಗೆ ಅವರೆಲ್ಲರೂ ಗ್ರಾಮದಲ್ಲಿರುವ ಎರಡೂ ದರ್ಗಾಗಳ ಎದುರು ವೇದಿಕೆ ಹಾಕಿ ಮದುವೆ ಮಾಡಿಸುತ್ತಿದ್ದರು. ಆದರೆ ಮಹಿಬೂಬ್‌ ಅವರು ಹಿಂದೂ ಸಮಾಜದವರೊಂದಿಗೆ ಕೂಡಿ ಖಂಡೇಶ್ವರನ ಪಾದುಕೆ ಎದುರು ಮದುವೆ ಮಾಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next