ಬೆಂಗಳೂರು: ಫೇಸ್‌ಬುಕ್‌ನಲ್ಲಿ ಮಹಿಳೆಯನ್ನು ಪರಿಚಯಿಸಿಕೊಂಡ ಸೈಬರ್ ಕಳ್ಳರು ಮ್ಯಾರೇಜ್ ಗಿಫ್ಟ್ ಕಳುಹಿಸುವುದಾಗಿ 3.71 ಲಕ್ಷ ರೂ. ಲಪಟಾಯಿಸಿದ್ದಾರೆ.
ಎಚ್‌ಎಸ್‌ಆರ್ ಲೇಔಟ್ ನಿವಾಸಿ ಅಮರಾವತಿ (44) ವಂಚನೆಗೊಳಗಾದ ವರು.
ಅಮರಾವತಿಗೆ ಫೇಸ್ ಬುಕ್‌ನಲ್ಲಿ ಅಪರಿಚಿತ ಯುವಕನೊಬ್ಬ ಪರಿಚಯವಾಗಿದ್ದ. ನಂತರ ಆತನಿಗೆ ತಮ್ಮ ವಾಟ್ಸ್‌ಆ್ಯಪ್ ನಂಬರ್ ಕೊಟ್ಟಿದ್ದಳು. ಇದಾದ ಬಳಿಕ ಇಬ್ಬರೂ ಸಲುಗೆಯಿಂದ ಮಾತನಾಡುತ್ತಿದ್ದರು. ತಾನು ನಿಮಗೆ ಬೆಲೆ ಬಾಳುವ ಮ್ಯಾರೇಜ್ ಗಿಫ್ಟ್ ಕಳುಹಿಸುವುದಾಗಿ ನಂಬಿಸಿದ್ದ.
ಇದಾದ ಕೆಲ ದಿನಗಳ ಬಳಿಕ ಅಮರಾವತಿ ಅವರಿಗೆ ಅಪರಿಚಿತ ರೊಬ್ಬರು ಕರೆ ಮಾಡಿ ತಾವು ನವದೆಹಲಿಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿ ಕೊಂಡು “ನಿಮ್ಮ ಹೆಸರಿಗೆ ಬೆಲೆ ಬಾಳುವ ಉಡುಗೊರೆಗಳು ಪಾರ್ಸೆಲ್ ಬಂದಿದ್ದು, ಇದನ್ನು ಪಡೆಯಲು ಶುಲ್ಕ ಪಾವತಿಸಬೇಕಾಗುತ್ತದೆ’ ಎಂದು ಹೇಳಿ ಹಂತ-ಹಂತ ವಾಗಿ 3.71 ಲಕ್ಷ ರೂ. ಲಪಟಾಯಿಸಿದ್ದರು.
ಇದಾದ ಬಳಿಕ ಉಡುಗೊರೆಯೂ ಬಾರದೇ, ಕೊಟ್ಟ ದುಡ್ಡು ಹಿಂತಿರುಗಿಸದಿದ್ದ ಹಿನ್ನೆಲೆಯಲ್ಲಿ ಅಮರಾವತಿ ಫೇಸ್ ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ಹಾಗೂ ಡೆಲ್ಲಿಯಿಂದ ಕರೆ ಮಾಡಿದ ವ್ಯಕ್ತಿ ಕೂಡ ಸಂಪರ್ಕಕ್ಕೆ ಸಿಗಲಿಲ್ಲ. ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.