Advertisement

ಮದುವೆಯ ಸಿಂಧುತ್ವವನ್ನು ಮಕ್ಕಳು ಪ್ರಶ್ನಿಸಬಹುದೇ?

12:06 AM Jul 02, 2021 | Team Udayavani |

ಹೊಸದಿಲ್ಲಿ: ಅಂತರ್‌ ಧರ್ಮೀಯ ವಿವಾಹದ ಸಿಂಧುತ್ವವನ್ನು ಯಾರು ಪ್ರಶ್ನಿಸಬಹುದು ಎಂಬ ಕುತೂಹಲಕಾರಿ ಪ್ರಶ್ನೆ ಸುಪ್ರೀಕೋರ್ಟ್‌ ಮುಂದೆ ಪ್ರಸ್ತಾವ ವಾಗಿದೆ. ಮೊದಲ ಮದುವೆಯಿಂದ ಹುಟ್ಟಿರುವ ಮಕ್ಕಳು, ತಮ್ಮ ತಂದೆಯ ಎರಡನೇ ಮದುವೆಯ ಸಿಂಧುತ್ವವನ್ನು ಪ್ರಶ್ನಿಸಬಹುದೇ ಎಂಬ ಕುರಿತು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಮುಂದಾಗಿದೆ.

Advertisement

ವಿವಾಹಿತ ಮುಸ್ಲಿಂ ಮಹಿಳೆ 1982ರಲ್ಲಿ ಪತಿಯಿಂದ ವಿಚ್ಛೇದನ ಪಡೆದು, 2003ರಲ್ಲಿ ಹಿಂದೂ ವ್ಯಕ್ತಿಯನ್ನು ವಿವಾಹವಾಗಿದ್ದರು. ಈ ನಡುವೆ 2015ರಲ್ಲಿ ಆ ವ್ಯಕ್ತಿ ನಿಧನ ಹೊಂದಿದ್ದರು. 2016ರಲ್ಲಿ ಆ ವ್ಯಕ್ತಿಯ ಮೊದಲ ವಿವಾಹದಿಂದ ಹುಟ್ಟಿದ್ದ ಪುತ್ರರು ತಮ್ಮ ಮಲತಾ ಯಿಯ ವಿವಾಹ ಕಾನೂನು ಬದ್ಧವಾಗಿಲ್ಲ. ಏಕೆಂದರೆ ಅವರ ಮೊದಲ ವಿವಾಹ ವಿಚ್ಛೇದನ ಕಾನೂನುಬದ್ಧ ವಾಗಿ ನಡೆದಿಲ್ಲ ಎಂದು ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಆದರೆ ವಿಶೇಷ ವಿವಾಹ ಕಾಯ್ದೆಯನ್ವಯ, ಮದುವೆಯ ಸಿಂಧುತ್ವ ಪ್ರಶ್ನಿಸಲು ಪತಿ ಅಥವಾ ಪತ್ನಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಮಕ್ಕಳು ಇದನ್ನು ಪ್ರಶ್ನಿಸುವಂತಿಲ್ಲ ಎಂದು ಮಹಿಳೆ ಪರ ವಕೀಲರು ವಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next