Advertisement

ಮಾರ್ನಾಡ್‌ಗೆ “ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ’ಪ್ರದಾನ

04:55 PM Dec 01, 2019 | Suhan S |

ಮುಂಬಯಿ, ನ. 30: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ನಾಟಕಅಕಾಡೆಮಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನ. 30ರಂದು ಅಪರಾಹ್ನ ಸಾಂತಾಕ್ರೂಜ್‌ ಪೂರ್ವದ ಮುಂಬಯಿವಿ.ವಿ.ಯ ಕಲೀನಾ ವಿದ್ಯಾನಗರಿಯ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ 2018ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೋಹನ್‌ ಮಾರ್ನಾಡ್‌ ಅವರಿಗೆ ಪ್ರಶಸ್ತಿ ಪ್ರದಾನ ಮತ್ತು ಅನಿತಾ ಪಿ. ತಾಕೋಡೆ ರಚಿಸಿದಮೋಹನ ತರಂಗ ಮಾರ್ನಾಡರ ರಂಗ ಜೀವನಕಥನ ಕೃತಿ ಬಿಡುಗಡೆ ಕಾರ್ಯಕ್ರಮ ಜರಗಿತು.

Advertisement

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷಜೆ. ಲೋಕೇಶ್‌, ಗೌರವಾನ್ವಿತ ಅತಿಥಿಗಳಾಗಿಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಎನ್‌. ಸಿ. ಶೆಟ್ಟಿ, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ, ರಂಗತಜ್ಞ ಡಾ| ಬಿ. ಆರ್‌. ಮಂಜುನಾಥ್‌, ಚಲನಚಿತ್ರ ನಿರ್ಮಾಪಕ ಮಹೇಶ್‌ ತಲಕಾಡ್‌, ನೀನಾಸಂ ಇದರ ಹೆಸರಾಂತ ರಂಗ ನಿರ್ದೇಶಕ ಎಂ.ಗಣೇಶ ಅವರು ಉಪಸ್ಥಿತರಿದ್ದು ಮುಂಬಯಿ ತುಳು-ಕನ್ನಡ ರಂಗಭೂಮಿಯ ಹೆಸರಾಂತ ಕಲಾವಿದ ಮೋಹನ್‌ ಮಾರ್ನಾಡ್‌ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ರಂಗ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷರಾದ ಮನೋಹರ ಕೋರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೋಹನ್‌ ಮಾರ್ನಾಡ್‌ ಅವರ ಧರ್ಮಪತ್ನಿ ಸೀಮಾ ಮೋಹನ್‌, ಕು| ಮಾನವಿ ಮೋಹನ್‌, ರಂಗ ಕಲಾವಿದರುಗಳಾದಸುರೇಂದ್ರ ಮಾರ್ನಾಡ್‌, ಮಾ| ಸುವಿಧ್‌ ಸೂರಿ, ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಓಂದಾಸ್‌ ಕಣ್ಣಂಗಾರ್‌, ಮಾಜಿ ಉಪಾಧ್ಯಕ್ಷ ಡಾ|ಭರತ್‌ಕುಮಾರ್‌ ಪೊಲಿಪು, ರಾಜೀವ ನಾಯ್ಕ,ಅನಿತಾ ಪಿ. ಪೂಜಾರಿ ತಾಕೋಡೆ, ಅವಿನಾಶ್‌ ಕಾಮತ್‌ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.

ದೂರದರ್ಶನ ಗಾಯಕ ವಿಜಯ ಪ್ರಕಾಶ್‌ ಮೋಹನ್‌ ಮಾರ್ನಾಡ್‌ ಅವರನ್ನು ಸಂಗೀತದ ಮೂಲಕ ಗೌರವಿಸಿದರು. ಇದೇ ಸಂದರ್ಭದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿಯ ಸದಸ್ಯೆ, ಲೇಖಕಿ,ಕವಯತ್ರಿ ಅನಿತಾ ಪಿ. ಪೂಜಾರಿ ತಾಕೋಡೆ ರಚಿತ ಐದನೆಯ ಕೃತಿ ಮೋಹನ್‌ ಮಾರ್ನಾಡ್‌ ಅವರ ಜೀವನ ಕಥನ “ಮೋಹನ ತರಂಗ’ ಕೃತಿಯನ್ನು ಡಾ| ಬಿ. ಆರ್‌ ಮಂಜುನಾಥ್‌, ಬಿಡುಗಡೆಗೊಳಿಸಿದರು. ರಂಗ ಕಲಾವಿದ ಅವಿನಾಶ್‌ ಕಾಮತ್‌ ಅವರು ಕೃತಿಗಳನ್ನು ಪರಿಚಯಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೋಹನ ಸಹೋದರ ಬಳಗದಿಂದ ತಾಳಮದ್ದಳೆ ನಡೆಯಿತು.

 

Advertisement

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next