ಮುಂಬಯಿ : ನಿರಂತರ ನಾಲ್ಕು ದಿನಗಳ ಗೆಲುವಿನ ಹಾದಿಯಲ್ಲಿ ಸಾಗಿ ಬಂದು ಇಂದು ಶುಕ್ರವಾರ ಸೋಲಿನ ಹಾದಿಯತ್ತ ಹೊರಳಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ದಿನದ ವಹಿವಾಟನ್ನು 53.99 ಅಂಕಗಳ ನಷ್ಟದೊಂದಿಗೆ 36,671.43 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22.80 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,035.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಹಾಗಿದ್ದರೂ ಈ ವಾರದಲ್ಲಿ ಸೆನ್ಸೆಕ್ಸ್ 607.62 ಅಂಕಗಳನ್ನು ಸಂಪಾದಿಸಿದೆ; ಇದೇ ನಿಫ್ಟಿ 171.90 ಅಂಕಗಳನ್ನು ಗಳಿಸಿದೆ.
ಇಂದಿನ ವಹಿವಾಟಿನಲ್ಲಿ ಟಾಟಾ ಮೋಟರ್ ಶೇರು ಶೇ.3.99ರ ನಷ್ಟಕ್ಕೆ ಗುರಿಯಾಯಿತು. ಇದನ್ನು ಅನುಸರಿಸಿ ಎಚ್‌ಸಿಎಲ್ ಟೆಕ್, ಟಾಟಾ ಸ್ಟೀಲ್, ವೇದಾಂತ, ಇನ್‌ಫೋಸಿಸ್, ಒಎನ್‌ಜಿಸಿ, ಏಶ್ಯನ್ ಪೇಂಟ್, ಮಾರುತಿ, ಎಲ್ ಆ್ಯಂಡ್ ಟಿ ಶೇರುಗಳು ಶೇ.2.53ರ ನಷ್ಟಕ್ಕೆ ಗುರಿಯಾದವು.
Related Articles
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,788 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,212 ಶೇರುಗಳು ಮುನ್ನಡೆ ಸಾಧಿಸಿದವು; 1,429 ಶೇರುಗಳು ಹಿನ್ನಡೆಗೆ ಗುರಿಯಾದವು; 147 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.