ಮುಂಬಯಿ : ಈ ಬಾರಿಯ ಮುಂಗಾರಿನಲ್ಲಿ ಶೇ.98ರಷ್ಟು ಮಳೆಯಾಗುವುದೆಂಬ ಹವಾಮಾನ ಇಲಾಖೆಯ ವರದಿಯಿಂದ ಗೆದಗೆದರಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 56 ಅಂಕಗಳ ಮುನ್ನಡೆಯನ್ನು ದಾಖಲಿಸಿತು.
ಆದರೆ ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 0.76 ಅಂಕಗಳ ನಷ್ಟದೊಂದಿಗೆ 31,270.52 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.65 ಅಂಕಗಳ ನಷ್ಟದೊಂದಿಗೆ 9,663.25 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಡಾ. ರೆಡ್ಡಿ, ಎಚ್‌ಡಿಎಫ್ಸಿ, ಟಾಟಾ ಮೋಟರ್ (ಡಿ) ಮತ್ತು ಹಿಂಡಾಲ್ಕೋ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿ ಟಾಪ್ ಗೇನರ್ ಎನಿಸಿಕೊಂಡಿದ್ದವು.
ಇದಕ್ಕೆ ವ್ಯತಿರಿಕ್ತವಾಗಿ ಟಿಸಿಎಸ್, ಗೇಲ್, ಭಾರ್ತಿ ಇನ್‌ಫ್ರಾಟೆಲ, ಅದಾನಿ ಪೋರ್ಟ್, ಎಚ್‌ಸಿಎಲ್ ಟೆಕ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡಿದ್ದವು.
ಬೆಳಗ್ಗಿನ ವಹಿವಾಟಿನಲ್ಲಿ 1,208 ಶೇರುಗಳು ವ್ಯವಹಾರಕ್ಕೆ ಒಳಪಟ್ಟಿದ್ದವು; 796 ಶೇರುಗಳು ಮುನ್ನಡೆ ಸಾಧಿಸಿದ್ದವು; 369 ಶೇರುಗಳು ಹಿನ್ನಡೆಗೆ ಗುರಿಯಾಗಿದ್ದವು; 43 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.