ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಧನಾತ್ಮಕ ವಹಿವಾಟಿನ ಪರಿಣಾಮ ಶುಕ್ರವಾರ (ಮೇ 27) ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕಗಳಷ್ಟು ಏರಿಕೆಯೊಂದಿಗೆ ವಾರಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ: ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 632.13 ಅಂಕಗಳಷ್ಟು ಏರಿಕೆಯಾಗಿದ್ದು, 54,884.66 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಷೇರುಪೇಟೆ ಮಧ್ಯಂತರ ವಹಿವಾಟಿನ ವೇಳೆ ಸೆನ್ಸೆಕ್ಸ್ 684.1 ಅಂಕಗಳಷ್ಟು ಏರಿಕೆಯಾಗಿದ್ದು, 54,936.63 ಅಂಕಗಳ ಮಟ್ಟ ತಲುಪಿತ್ತು.
ಅದೇ ರೀತಿ ಎನ್ ಎಸ್ ಇ ನಿಫ್ಟಿ 182.30 ಅಂಕ ಏರಿಕೆಯಾಗಿದ್ದು, 16,352.45 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಸೆನ್ಸೆಕ್ಸ್ ಏರಿಕೆಯಿಂದ ಟೆಕ್ ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ವಿಪ್ರೋ, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಬಜಾಜ್ ಫಿನ್ ಸರ್ವ್, ಎಲ್ ಆ್ಯಂಡ್ ಟಿ ಮತ್ತು ಎಚ್ ಸಿಎಲ್ ಟೆಕ್ನಾಲಜೀಸ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಎನ್ ಟಿಪಿಸಿ, ಭಾರ್ತಿ ಏರ್ ಟೆಲ್, ಪವರ್ ಗ್ರಿಡ್, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಏಷಿಯನ್ ಪೇಂಟ್ಸ್ ಮತ್ತು ನೆಸ್ಲೆ ಷೇರುಗಳು ನಷ್ಟ ಕಂಡಿದೆ. ಇನ್ನುಳಿದಂತೆ ಸಿಯೋಲ್, ಶಾಂಘೈ, ಟೋಕಿಯೋ ಮತ್ತು ಹಾಂಗ್ ಕಾಂಗ್ ಷೇರುಪೇಟೆ ಸೆನ್ಸೆಕ್ಸ್ ಭಾರೀ ಏರಿಕೆಯೊಂದಿಗೆ ವಹಿವಾಟು ಕೊನೆಗೊಂಡಿದೆ.