ಮಂಡ್ಯ: ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣಹೆಚ್ಚಾಗುತ್ತಿದ್ದರೂ ಸಾರ್ವಜನಿಕರು ಮಾತ್ರಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.ಮಾರುಕಟ್ಟೆ, ಕೊರೊನಾ ಮಾದರಿ ಸಂಗ್ರಹಕೇಂದ್ರಗಳು ಹಾಗೂ ಲಸಿಕಾ ಕೇಂದ್ರಗಳುಸೋಂಕು ಹರಡುವ ಹಾಟ್‌ಸ್ಪಾಟ್‌ಗಳಾಗುತ್ತಿವೆ.
ಸರ್ಕಾರ ಜನತಾಕರ್ಫ್ಯೂ ಹೇರಿದೆ. ಈನಡುವೆ ಪ್ರತಿದಿನ ಬೆಳಗ್ಗೆ 6ರಿಂದ 10ರವರೆಗೆಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ಈ ಸಂದರ್ಭದಲ್ಲಿ ಮಾರುಕಟ್ಟೆಗಳು ತುಂಬಿ ತುಳುಕುತ್ತಿವೆ. ಸಂದಣಿಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕುವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿದೆ.
ಜಿಲ್ಲೆಯಾದ್ಯಂತ ನಿರ್ಲಕ್ಷ್ಯ: ಮಂಡ್ಯ ನಗರಸೇರಿದಂತೆ ಜಿಲ್ಲೆಯ 7 ತಾಲೂಕುಗಳಮಾರುಕಟ್ಟೆಗಳಲ್ಲಿ ಗ್ರಾಹಕರು, ವರ್ತಕರು,ವ್ಯಾಪಾರಸ್ಥರು ಯಾವುದೇ ಸಾಮಾಜಿಕಅಂತರವಿಲ್ಲದೆ ಓಡಾಡುತ್ತಿದ್ದಾರೆ. ಮಂಡ್ಯನಗರದ ಯಾವ ಮಾರುಕಟ್ಟೆಯಲ್ಲೂಅಂತರ ಕಾಪಾಡುತ್ತಿಲ್ಲ. ಸರ್‌ಎಂವಿಕ್ರೀಡಾಂಗಣ, ಹೊಸಹಳ್ಳಿ ವೃತ್ತ, ಮಹಾವೀರವೃತ್ತ, ಗುತ್ತಲು ರಸ್ತೆಗಳಲ್ಲಿ ಮಾರುಕಟ್ಟೆನಡೆಯುತ್ತಿದೆ. ಮೊಟ್ಟೆ, ಮೀನು, ಮಾಂಸಅಂಗಡಿಗಳು, ದಿನಸಿ ಅಂಗಡಿಗಳಲ್ಲೂಸಾಮಾಜಿಕ ಅಂತರ ಮಾಯವಾಗಿದೆ. ಇದುಕೊರೊನಾ ಸ್ಫೋಟಕ್ಕೆ ಕಾರಣವಾಗುತ್ತಿದೆ.
ಲಸಿಕೆ, ಮಾದರಿ ಸಂಗ್ರಹದಲ್ಲೂ ನಿರ್ಲಕ್ಷ್ಯ: ಕೊರೊನಾ ಪರೀಕ್ಷೆ ನಡೆಸಲುಮಾದರಿ ಸಂಗ್ರಹಿಸುವ ಕೇಂದ್ರಗಳು ಹಾಗೂಕೊರೊನಾ ಲಸಿಕೆ ಕೇಂದ್ರಗಳೂ ಸೋಂಕುಹರಡುವ ತಾಣಗಳಾಗಿವೆ. ಪರೀಕ್ಷಾಮಾದರಿ ಸಂಗ್ರಹ ಹಾಗೂ ಲಸಿಕೆಪಡೆಯುವ ಸಾರ್ವಜನಿಕರು ಕೇಂದ್ರಗಳಲ್ಲಿಸಾಮಾಜಿಕ ಅಂತರ ಮರೆತು ಗುಂಪಾಗಿನಿಲ್ಲುತ್ತಿದ್ದಾರೆ. ಈ ವೇಳೆ ಯಾರಿಗೆ ಸೋಂಕುಇದೆ ಎಂಬುದೇ ತಿಳಿಯುತ್ತಿಲ್ಲ.
ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರಕರಣ:ಜನರ ನಿರ್ಲಕ್ಷ Âದಿಂದಾಗಿ ಜಿಲ್ಲೆಯಲ್ಲಿಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರಕರಣಗಳುದಾಖಲಾಗುತ್ತಿವೆ. ಕಳೆದ 15 ದಿನಗಳಿಂದ12 ಸಾವಿರಕ್ಕೂ ಹೆಚ್ಚು ಪ್ರಕರಣಗಳುದಾಖಲಾಗಿವೆ. ಅಂತರ, ಮಾಸ್ಕ್,ಸ್ಯಾನಿಟೈಸರ್ ಬಳಸದಿರುವುದು ಸೋಂಕಿನಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿ ಕಾರಿಎಚ್.ಪಿ.ಮಂಚೇಗೌಡ.