ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ನಿಸ್ತೇಜತೆ ಮತ್ತು ದೇಶದ ಸ್ಥೂಲ ಆರ್ಥಿಕಾಭಿವೃದ್ಧಿ ಅಂಕಿ ಅಂಶಗಳ ಕೆಳಮಟ್ಟದಲ್ಲಿರುವುದೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 50.12 ಅಂಕಗಳ ನಷ್ಟದೊಂದಿಗೆ ಇಂದು ಗುರುವಾರದ ವಹಿವಾಟನ್ನು 38,981.43 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.40 ಅಂಕಗಳ ಕುಸಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,724.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಟಾಪ್ ಲೂಸರ್‌ಗಳ ಪೈಕಿ ಅಗ್ರ ಸ್ಥಾನಿಯಾದ ಟಾಟಾ ಮೋಟರ್ ಶೇರು ಇಂದು ಶೇ.3.29ರ ಕುಸಿತಕ್ಕೆ ಗುರಿಯಾಯಿತು.
ಇದನ್ನು ಅನುಸರಿಸಿ ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಇನ್‌ಫೋಸಿಸ್, ಎಚ್‌ಸಿಎಲ್ ಟೆಕ್, ಎಕ್ಸಿಸ್ ಬ್ಯಾಂಕ್, ಟಿಸಿಎಸ್, ಎಚ್‌ಯುಎಲ್, ಏಶ್ಯನ್ ಪೇಂಟ್, ಸನ್ ಫಾರ್ಮಾ, ಎಸ್‌ಬಿಐ, ಟಾಟಾ ಸ್ಟೀಲ್ ಶೇರುಗಳು ಶೇ.3.23ರ ವರೆಗಿನ ನಷ್ಟಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,681 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,073 ಶೇರುಗಳು ಮುನ್ನಡೆ ಸಾಧಿಸಿದವು; 1,444 ಶೇರುಗಳು ಹಿನ್ನಡೆಗೆ ಗುರಿಯಾದವು; 164 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.