Advertisement

ಕೊನೇ ಕ್ಷಣದ ಮಾರಾಟ ಒತ್ತಡ, ಮುಂಬಯಿ ಶೇರು ಅಲ್ಪ ಕುಸಿತ

10:08 AM May 04, 2019 | |

ಮುಂಬಯಿ : ಐಟಿ ಬ್ಲೂ ಚಿಪ್‌ ಶೇರುಗಳಲ್ಲಿ ಕಂಡು ಬಂದ ದೌರ್ಬಲ್ಯವನ್ನು ಅನುಸರಿಸಿ ಕೊನೇ ಕ್ಷಣದಲ್ಲಿ ಉಂಟಾದ ಅಛಾನಕ್‌ ಮಾರಾಟದ ಒತ್ತಡಕೆ ನಲುಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 18.17 ಅಂಕಗಳ ನಷ್ಟದೊಂದಿಗೆ ಇಂದು ಶುಕ್ರವಾರದ ವಹಿವಾಟನ್ನು 38,963.26 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 12.50 ಅಂಕಗಳ ಕುಸಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,712.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇಂದಿನ ಟಾಪ್‌ ಲೂಸರ್‌ಗಳಾದ ಟಿಸಿಎಸ್‌, ಎಚ್‌ ಯು ಎಲ್‌, ಟಾಟಾ ಸ್ಟೀಲ್‌, ಎಚ್‌ ಸಿ ಎಲ್‌ ಟೆಕ್‌, ಇನ್‌ಫೋಸಿಸ್‌, ಬಜಾಜ್‌ ಫಿನಾನ್ಸ್‌, ಎಚ್‌ ಡಿ ಎಫ್ ಸಿ, ಇಂಡಸ್‌ ಇಂಡ್‌ ಬ್ಯಾಂಕ್‌, ಏಶ್ಯನ್‌ ಪೇಂಟ್‌, ಐಟಿಸಿ ಮತ್ತು ವೇದಾಂತ ಶೇರುಗಳು ಶೇ.3.70 ಪ್ರಮಾಣದಲ್ಲಿ ಕುಸಿದವು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,704 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,037 ಶೇರುಗಳು ಮುನ್ನಡೆ ಸಾಧಿಸಿದವು; 1,477 ಶೇರುಗಳು ಹಿನ್ನಡೆಗೆ ಗುರಿಯಾದವು; 190 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next