Advertisement

ಅಮೆರಿಕ-ಚೀನ ವಾಣಿಜ್ಯ ಸಮರ ಭೀತಿ: ಸೆನ್ಸೆಕ್ಸ್‌ 74 ಅಂಕ ಕುಸಿತ

04:50 PM Jun 18, 2018 | |

ಮುಂಬಯಿ : ಅಮೆರಿಕ – ಚೀನ ನಡುವಿನ ವಾಣಿಜ್ಯ ಸಮರ ಜಾಗತಿಕ ವಾಣಿಜ್ಯ ಬಿಕ್ಕಟ್ಟಿಗೆ ಕಾರಣವಾಗುವ ಭೀತಿಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 73.88 ಅಂಕಗಳ ನಷ್ಟದೊದಿಗೆ 35,548.26 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 17.85 ಅಂಕಗಳ ಕುಸಿತವನ್ನು ಕಂಡು 10,799.85 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು. 

ಇಂದಿನ ವಹಿವಾಟಿನಲ್ಲಿ ಒಟ್ಟು 2,796 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; 931 ಶೇರುಗಳು ಮುನ್ನಡೆ ಕಂಡವು; 1,710 ಶೇರುಗಳು ಹಿನ್ನಡೆಗೆ ಗುರಿಯಾದವು; 155 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

ಇಂದಿನ ಟಾಪ್‌ ಗೇನರ್‌ಗಳು : ಎಚ್‌ ಪಿ ಸಿ ಎಲ್‌, ಐಸಿಐಸಿಐ ಬ್ಯಾಂಕ್‌, ಐಡಿಯಾ ಸೆಲ್ಯುಲರ್‌, ಬಿಪಿಸಿಎಲ್‌, ಟಾಟಾ ಮೋಟರ್‌; ಟಾಪ್‌ ಲೂಸರ್‌ಗಳು : ಹಿಂಡಾಲ್ಕೋ, ವೇದಾಂತ, ಭಾರ್ತಿ ಏರ್‌ಟೆಲ್‌, ಕೋಟಕ್‌ ಮಹೀಂದ್ರ, ಬಜಾಜ್‌ ಫಿನಾನ್ಸ್‌. 

Advertisement

Udayavani is now on Telegram. Click here to join our channel and stay updated with the latest news.

Next