Advertisement

ಎರಡನೇ ದಿನವೂ ಕುಸಿತ: ಮುಂಬಯಿ ಶೇರು 43 ಅಂಕ ನಷ್ಟ

04:34 PM May 30, 2018 | udayavani editorial |

ಮುಂಬಯಿ : ಎರಡನೇ ದಿನವೂ ಕುಸಿತದ ಹಾದಿಯನ್ನು ಹಿಡಿದಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 43 ಅಂಕಗಳ ನಷ್ಟದೊಂದಿಗೆ 34,906.11 ಅಂಕಗಳ ಮಟ್ಟದಲ್ಲಿ ಇಂದು ಬುಧವಾರದ ವಹಿವಾಟನ್ನು ಕೊನೆಗೊಳಿಸಿದೆ. 

Advertisement

ಮೇ ತಿಂಗಳ ವಾಯಿದೆ ವಹಿವಾಟು ಈ ಗುರುವಾರ ಇತ್ಯರ್ಥವಾಗಲಿರುವ ನಡುವೆಯೇ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ತೋರಿ ಬಂದಿರುವುದು ಮುಂಬಯಿ ಶೇರು ಪೇಟೆಯ ಹಿನ್ನಡೆಗೆ ಕಾರಣವೆಂದು ತಿಳಿಯಲಾಗಿದೆ. ಕಳೆದ ಎರಡು ದಿನಗಳಲ್ಲಿ ಸೆನ್ಸೆಕ್ಸ್‌ ಒಟ್ಟು 216.24 ಅಂಕಗಳ ನಷ್ಟವನ್ನು ಅನುಭವಿಸಿದಂತಾಗಿದೆ.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 18.95 ಅಂಕಗಳ ನಷ್ಟಕ್ಕೆ ಗುರಿಯಾಗಿ ಇಂದು ಬುಧವಾರದ ವಹಿವಾಟನ್ನು 10,614.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ನಿನ್ನೆ ಮಂಗಳವಾರ ವಿದೇಶಿ ಹೂಡಿಕೆದಾರರು 407.33 ಕೋಟಿ ರೂ. ಶೇರುಗಳನ್ನು ಮಾರಿದ್ದರು; ವ್ಯತಿರಿಕ್ತವಾಗಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು 578.38 ಕೋಟಿ ಶೇರುಗಳನ್ನು ಖರೀದಿಸಿದ್ದರು. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,854 ಕಂಪೆನಿಗಳ ಶೇರು ವಹಿವಾಟಿಗೆ ಒಳಪಟ್ಟವು; 1,213 ಶೇರುಗಳು ಮುನ್ನಡೆ ಸಾಧಿಸಿದವು; 1,479 ಶೇರುಗಳು ಹಿನ್ನಡೆಗೆ ಗುರಿಯಾದವು; 162 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next