ಮುಂಬಯಿ : ನಿರಂತರ ಮೂರನೇ ದಿನವೂ ಮುನ್ನುಗ್ಗಿ ಹೊಸ ಎತ್ತರವನ್ನು ದಾಖಲಿಸಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 57.63 ಅಂಕಗಳ ಏರಿಕೆಯೊಂದಿಗೆ 31,804.82 ಅಂಕಗಳ ಮಟ್ಟದಲ್ಲಿ ಅದಮ್ಯ ಉತ್ಸಾಹದೊಂದಿಗೆ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 30.05 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 9,816.10 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ವ್ಯವಹಾರದ ಮಧ್ಯದಲ್ಲಿ ಒಮ್ಮೆ ಸೆನ್ಸೆಕ್ಸ್ 31,865.69 ಅಂಕಗಳ ಎತ್ತರವನ್ನು ಏರಿತ್ತಾದರೆ ನಿಫ್ಟಿ 9,824.95 ಅಂಕಗಳ ಎತ್ತರವನ್ನು ದಾಖಲಿಸಿತ್ತು.
ಇಂದಿನ ವಹಿವಾಟಿನಲ್ಲಿ ಟಾಪ್ ಗೇನರ್ ಪಟ್ಟಿಯಲ್ಲಿ ಮುಖ್ಯವಾಗಿ ಕಂಡು ಬಂದ ಶೇರುಗಳೆಂದರೆ ಹಿಂದುಸ್ಥಾನ್ ಯುನಿಲಿವರ್, ಒಎನ್‌ಜಿಸಿ, ಎಸ್‌ಬಿಐ, ಟಾಟಾ ಮೋಟರ್, ಐಸಿಐಸಿಐ ಬ್ಯಾಂಕ್. ಟಾಪ್ ಲೂಸರ್ ಎನಿಸಿಕೊಂಡ ಶೇರುಗಳೆಂದರೆ ಮಹೀಂದ್ರ, ಐಟಿಸಿ, ಹೀರೋ ಮೋಟೋ ಕಾರ್ಪ್, ಡಾ. ರೆಡ್ಡಿ.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಸಂಖ್ಯೆ 3,019. ಮುನ್ನಡೆ ಕಂಡ ಶೇರುಗಳು 1,579. ಹಿನ್ನಡೆಗೆ ಗುರಿಯಾದ ಶೇರುಗಲು 1,268. ಯಾವುದೇ ಬದಲಾವಣೆ ಕಾಣದಿದ್ದ ಶೇರುಗಳು 172.