ಹೋಂಡಾ ಬೈಕ್ ಮಾರಾಟ
ಶೇ. 16ರಷ್ಟು ಹೆಚ್ಚಳ ಹೋಂಡಾ ಬೈಕ್ ಮತ್ತು ಸ್ಕೂಟರ್‌ಗಳ ಮಾರಾಟದಲ್ಲಿ ಶೇ. 16ರಷ್ಟು ಹೆಚ್ಚಳವಾಗಿದ್ದು, ವಾರ್ಷಿಕವಾಗಿ 26,728 ಕೋಟಿ ರೂ. ಲಾಭಗಳಿಸಿದೆ. ಈ ಮೂಲಕ ದೇಶದ ಎರಡನೇ ದೊಡ್ಡ ಟು ವೀಲರ್ ತಯಾರಕರು ಎಂಬ ಖ್ಯಾತಿಯನ್ನು ಪಡೆದಿದೆ. ಸ್ಥಳೀಯ ಮಾರಾಟ ಘಟಕಗಳಲ್ಲಿ 2011 ರ ಅನಂತರ ಮೂರು ಪಟ್ಟು ಹೆಚ್ಚು ಮಾರಾಟವಾಗಿದೆ. ಹೋಂಡಾ ಕಂಪೆನಿಯ ಲಾಭದಲ್ಲಿ ಭಾರತಕ್ಕೆ ಶೇ. 15 ರಷ್ಟು ಲಾಭಾಂಶವಿದೆ. ಆಕ್ಟಿವಾ ಸ್ಕೂಟರ್ ಮಾರಾಟದಿಂದ ಹೋಂಡಾ ಸಂಸ್ಥೆ 1,983 ಕೋಟಿ ರೂ. ಲಾಭಗಳಿಸಿದೆ.
ವೋಕ್ಸ್‌ವ್ಯಾಗನ್ ಮೂರು
ಕಾರು ಘಟಕಗಳ ವಿಲೀನ ಜರ್ಮನಿಯ ಪ್ರಮುಖ ಅಟೋಮೊಬೈಲ್ ಸಂಸ್ಥೆ ವೋಕ್ಸ್‌ವಾಗನ್ ಭಾರತದಲ್ಲಿರುವ ಮೂರು ಪ್ರಯಾಣಿಕರ ಕಾರು ಘಟಕಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ. “ಸ್ಕೋಡಾ ಅಟೋ’ ಇದರ ನೇತೃತ್ವ ವಹಿಸಿಕೊಳ್ಳಲಿದೆ.
ವೋಕ್ಸ್‌ವಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವೋಕ್ಸ್ ವಾಗನ್ ಗ್ರೂಪ್ ಸೇಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಕೋಡಾ ಆಟೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿಲೀನ ಪ್ರಸ್ತಾವನೆಯನ್ನು ಅನುಮೋದಿಸಿದೆ. ವೋಕ್ಸ್ ವಾಗನ್, ಸ್ಕೋಡಾ, ಆಡಿ, ಪೋರ್ಷೆ ಮತ್ತು ಲಂಬೋರ್ಗಿನಿ-ವಿಡಬ್ಲೂé ಗ್ರೂಪ್ ಬ್ರ್ಯಾಂಡ್‌ಗಳು ವೈಯಕ್ತಿಕ ಗುರುತು, ವ್ಯಾಪಾರ ಜಾಲವನ್ನು ನಿರ್ವಹಿಸಲಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.