ಮುಂಬಯಿ: ಜಾಗತಿಕ ಷೇರುಪೇಟೆಯ ಭರ್ಜರಿಯ ವಹಿವಾಟಿನ ನಡುವೆಯೇ ಸೋಮವಾರ(ಆಕ್ಟೋಬರ್ 25) ಬಾಂಬೆ ಷೇರುಪೇಟೆ ಬೆಳಗ್ಗೆ ವಹಿವಾಟಿನಲ್ಲಿ ಕುಸಿತ ಕಂಡಿದ್ದು, ಇದೀಗ ಸಂವೇದಿ ಸೂಚ್ಯಂಕ 145 ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಬಿಜೆಪಿಯವರು ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ: ಸುರ್ಜೇವಾಲಾ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 145.43 ಅಂಕ ಏರಿಕೆಯಾಗಿದ್ದು, 60,967.05 ಸಾರ್ವಕಾಲಿಕ ದಾಖಲೆ ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 10.50 ಅಂಕ ಏರಿಕೆಯಾಗಿದ್ದು, 18,125.40 ಅಂಕಗಳ ಗಡಿ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಪರಿಣಾಮ ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಒಎನ್ ಜಿಸಿ, ಜೆಎಸ್ ಡಬ್ಲ್ಯು ಸ್ಟೀಲ್ ಮತ್ತು ಡಾ.ರೆಡ್ಡಿ ಲ್ಯಾಬೋರೇಟರೀಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಬಿಪಿಸಿಎಲ್, ಎಸ್ ಬಿಐ ಲೈಫ್ ಇನ್ಸೂರೆನ್ಸ್, ಬಜಾಜ್ ಫಿನ್ ಸರ್ವ್, ಬಜಾಜ್ ಆಟೋ ಮತ್ತು ಎಚ್ ಸಿಎಲ್ ಷೇರುಗಳು ನಷ್ಟ ಕಂಡಿದೆ.
ಇಂದು ಬೆಳಗ್ಗೆ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 114.93 ಅಂಕ ಇಳಿಕೆಯಾಗಿದ್ದು, 60,706.69 ಅಂಕಗಳಲ್ಲಿ ಆರಂಭಿಕ ವಹಿವಾಟು ನಡೆಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 58.55 ಅಂಕ ಕುಸಿತ ಕಂಡಿದ್ದು, 18,056.35 ಅಂಕಗಳಲ್ಲಿ ವಹಿವಾಟು ನಡೆದಿತ್ತು.