Advertisement

ಮುಂಬಯಿ ಶೇರು ನಿರಂತರ 3ನೇ ದಿನ ಜಿಗಿತ; 216 ಅಂಕ ಜಂಪ್‌

11:01 AM Mar 13, 2019 | |

ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ  ಚುನಾವಣಾ ಪೂರ್ವ ರಾಲಿ ಮುಂದುವರಿದಿದ್ದು ಇಂದು ಬುಧವಾರ ನಿರಂತರ ಮೂರನೇ ದಿನವಾಗಿ ಸೆನ್ಸೆಕ್ಸ್‌ 216.51 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 37,752.17 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ  ಸೂಚ್ಯಂಕ 40.50 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 11,341.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದಿನ ವಹಿವಾಟಿನಲ್ಲಿ ಇಂಡಸ್‌ ಇಂಡ್‌ ಬ್ಯಾಂಕ್‌ ಶೇರು ಶೇ.4.15ರ ಜಿಗಿತವನ್ನು ಕಂಡಿತು. ಇದನ್ನು ಅನುಸರಿಸಿ ಎಸ್‌ ಬ್ಯಾಂಕ್‌, ಬಜಾಜ್‌ ಫಿನಾನ್ಸ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌, ಎಸ್‌ಬಿಐ, ಬಜಾಜ್‌ ಆಟೋ, ಆರ್‌ಐಎಲ್‌, ಎಚ್‌ ಸಿ ಎಲ್‌ ಟೆಕ್‌, ಎಚ್‌ ಡಿ ಎಫ್ ಸಿ ಮತ್ತು ಐಸಿಐಸಿಐ ಬ್ಯಾಂಕ್‌ ಶೇ.3.67ರ ಏರಿಕೆಯನ್ನು ದಾಖಲಿಸಿದವು.  ಡಾಲರ್‌ ಎದುರು ರೂಪಾಯಿ ಇಂದು 24 ಪೈಸೆಯ ಜಿಗತವನ್ನು ದಾಖಲಿಸಿ 69.47 ರೂ. ಮಟ್ಟದಲ್ಲಿ ವ್ಯವಹರಿಸುತ್ತಿತ್ತು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2.888 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,077 ಶೇರುಗಳು ಮುನ್ನಡೆ ಸಾಧಿಸಿದವು; 1.757 ಶೇರುಗಳು ಹಿನ್ನಡೆಗೆ ಗುರಿಯಾದವು; 155 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.     

Advertisement

Udayavani is now on Telegram. Click here to join our channel and stay updated with the latest news.

Next