Advertisement

ಮಾವಿಗೆ ಮಾರುಕಟ್ಟೆ ಒದಗಿಸಲು ಕ್ರಮ

01:23 PM Mar 10, 2017 | Team Udayavani |

ಧಾರವಾಡ: ಮಾವು ಬೆಳೆಗಾರರಿಗೆ ಮಾರುಕಟ್ಟೆ ಒದಗಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರಗಳಲ್ಲಿ 50ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಮಾವಿನ ಹಂಗಾಮಿನಲ್ಲಿ ತೆರೆಯಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಹೇಳಿದರು. 

Advertisement

ತೋಟಗಾರಿಕೆ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಆಶ್ರಯದಲ್ಲಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ರಫು ಗುಣಮಟ್ಟದ ಮಾವು ಬೇಸಾಯದ ಕುರಿತ ತಾಂತ್ರಿಕ ಕಾರ್ಯಾಗಾರವನ್ನು ಮಾವಿನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಮುಂಬರುವ ಮಾವಿನ ಹಂಗಾಮಿನಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಸುಮಾರು 50 ರಿಂದ 100 ಸ್ಥಳಗಳಲ್ಲಿ ಕನಿಷ್ಠ ನೂರು ಚದುರಡಿ ಅಳತೆಯ ಮಳಿಗೆಗಳನ್ನು ಪ್ರತಿಯೊಬ್ಬ ರೈತರಿಗೆ ಕನಿಷ್ಠ 10 ರಿಂದ 20 ದಿನಗಳ ಕಾಲ ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. 

 ಬೆಳೆಗಣತಿ ಮಾಡಿಸುವ ಮೂಲಕ ರೈತರಬೆಳೆದ ಬೆಳೆಗೆ ಹೆಚ್ಚು ನ್ಯಾಯ ಒದಗಿಸಲು ಸಾಧ್ಯವಿದೆ. ಧಾರವಾಡ ಜಿಲ್ಲೆಯಲ್ಲಿ ಬೆಳೆ ಗಣತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಧಾರವಾಡ ಜಿಲ್ಲೆಯಲ್ಲಿ ಸುಮಾರು 20 ಸಾವಿರಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. 

ಅಂತರ್ಜಲ ತೀವ್ರ ಕುಸಿದಿರುವ ಕೋಲಾರ ಜಿಲ್ಲೆಯ ಮಾವು ಬೆಳೆಗಾರರು ನಮಗಿಂತಲೂ ಕಠಿಣ ಪರಿಸ್ಥಿತಿಯಲ್ಲಿ ಮಾವು ಬೆಳೆದು ಉತ್ತಮ ಮಾರುಕಟ್ಟೆ ತಂತ್ರಜ್ಞಾನದಿಂದ ಲಾಭ ಗಳಿಸುತ್ತಿದ್ದಾರೆ. ಮಾವು ಬೆಳೆಗಾರರು ಅಭಿವೃದ್ಧಿ ಹೊಂದಿರುವ ಸಾರಿಗೆ, ಸಂಪರ್ಕ ಸಾಧನಗಳನ್ನು ಬಳಸಿಕೊಂಡು ದೂರದ ಮಾರುಕಟ್ಟೆ ಪ್ರವೇಶಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. 

Advertisement

ಮಾವು ರಫ್ತಿಗೆ ಉತ್ತೇಜನ: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಅಧ್ಯಕ್ಷ ಎಲ್‌.ಗೋಪಾಲಕೃಷ್ಣ ಮಾತನಾಡಿ, ರಾಜ್ಯದಲ್ಲಿ ಸುಮಾರು 1ಲಕ್ಷ 85 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದೆ. ಅದರಲ್ಲಿ ಕನಿಷ್ಠ ಶೇ.40ರಷ್ಟು ಅನುತ್ಪಾದಕ ಮರಗಳು ಇರುವುದರಿಂದ ರೈತರ ಮತ್ತು ರಾಜ್ಯ, ರಾಷ್ಟ್ರದ ವರಮಾನ ಕುಂಠಿತಗೊಳ್ಳಲು ಕಾರಣವಾಗಿದೆ ಎಂಬ ಅಂಶವನ್ನು ಬಾಗಲಕೋಟೆ ತೋಟಗಾರಿಕೆ ವಿವಿ ನಡೆಸಿದ ಅಧ್ಯಯನ ತಿಳಿಸಿದೆ.

ರಾಜ್ಯದ ಮಾವನ್ನು ಲೇಬಲ್‌ ಮೂಲಕ ಹೊರ ರಾಜ್ಯಗಳಿಗೆ ಸರಬರಾಜು ಮಾಡುವ ರೈತರಿಗೆ ನಿಗಮದಿಂದ ಸಹಾಯಧನ ನೀಡಲಾಗುವುದು ಎಂದರು. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಸುಮಾರು 35-40 ಸ್ಥಳಗಳಲ್ಲಿ ಹಾಗೂ ಗೋವಾದಲ್ಲೂ ಸಹ ಬೃಹತ್‌ ಮಾವುಮೇಳಆಯೋಜಿಸಲಾಗುವುದು. ರೈತರ ಸಲಹೆ ಸೂಚನೆಗಳನ್ನು ನಿಗಮ ಸ್ವೀಕರಿಸಿ, ಕಾರ್ಯಗತಗೊಳಿಸಲಿದೆ ಎಂದರು. 

ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ನಿರ್ದೇಶಕ ಹೆಚ್‌.ಸಿ. ಮೊರಬ, ಬಿ.ಕೆ.ರವಿಕುಮಾರ,ಮೊಹ್ಮದ್‌ ಇಸ್ಮಾಯಿಲ್‌, ಬಿ.ಎಸ್‌.ಗೌಡರ್‌, ಕೃಷಿ ವಿ.ವಿ.ಆಡಳಿತ ಮಂಡಳಿ ಸದಸ್ಯ ಈಶ್ವರಚಂದ್ರ ಹೊಸಮನಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಮ್‌.ಕುಂದಗೋಳ, ರಾಜು ಹನುಮಕ್ಕನವರ, ಕೃಷಿ ವಿ.ವಿ.ವಿಸ್ತರಣಾ ನಿರ್ದೇಶಕ ವಿ.ಐ.ಬೆಣಗಿ ಇದ್ದರು.

ತೋಟಗಾರಿಕೆ ಉಪನಿರ್ದೇಶಕ ಎಸ್‌.ಬಿ.ದಿಡ್ಡಿಮನಿ ಸ್ವಾಗತಿಸಿ,ಪ್ರಾಸ್ತಾವಿಕಮಾತನಾಡಿದರು. ಸಂಜೆಯವರೆಗೂ ರಫು¤ ಗುಣಮಟ್ಟದ ಮಾವು ಅಭಿವೃದ್ಧಿ ಕುರಿತು ತಾಂತ್ರಿಕ ಅಧಿವೇಶನಗಳು ಜರುಗಿದವು.  

Advertisement

Udayavani is now on Telegram. Click here to join our channel and stay updated with the latest news.

Next