Advertisement

ಭವಿಷ್ಯದಲ್ಲಿ ಫೇಸ್ಬುಕ್ ಆಗಲಿದೆಯೇ ‘ಸೀಕ್ರೆಟ್ ಬುಕ್’ !?

03:15 AM Mar 07, 2019 | Karthik A |

ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಖಾಸಗಿತನ ಮತ್ತು ಗೌಪ್ಯತೆಯ ಪಾಲನೆಯ ಕೊರತೆಯಿದೆ ಎಂಬ ಕೂಗು ವಿಶ್ವಾದ್ಯಂತ ಕೆಳಿಬರುತ್ತಿದೆ. ವಾಟ್ಸ್ಯಾಪ್ ಗೆ ಹೋಲಿಸಿದರೆ ಫೇಸ್ಬುಕ್ ನಲ್ಲಿ ಬಳಕೆದಾರರು ಹಂಚಿಕೊಳ್ಳುವ ಮಾಹಿತಿ ಬಟಾಬಯಲಾಗುವುದೇ ಹೆಚ್ಚು. ಈ ಎಲ್ಲಾ ವಿಚಾರಗಳನ್ನು ಅರ್ಥಮಾಡಿಕೊಂಡಿರುವ ಫೇಸ್ಬುಕ್ ಕಂಪೆನಿಯ ಮಾಲಕ ಮಾರ್ಕ್ ಝುಕರ್ ಬರ್ಗ್ ಅವರು, ಭವಿಷ್ಯದಲ್ಲಿ ಫೇಸ್ಬುಕ್ ಬಳಕೆದಾರರ ಖಾಸಗಿತನಕ್ಕೆ ಅತೀ ಹೆಚ್ಚಿನ ಆದ್ಯತೆಯನ್ನು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

Advertisement

ಫೇಸ್ಬುಕ್ ಮೇಸೇಜಿಂಗ್ ನಲ್ಲಿ ಎಲ್ಲಾ ಖಾಸಾ ಸಂವಹನಗಳಿಗೆ ಎಂಡ್ –ಟು – ಎಂಡ್ ಎನ್ಕ್ರಿಪ್ಷನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗಿರುವ ಅಗತ್ಯತೆಯನ್ನು ಝುಕರ್ ಬರ್ಗ್ ಅವರು ಇತ್ತೀಚೆಗಿನ ತಮ್ಮ ಫೇಸ್ವುಕ್ ಫೋಸ್ಟ್ ನಲ್ಲಿ ಒತ್ತಿ ಹೇಳಿದ್ದಾರೆ. ಇದರಿಂದಾಗಿ ಯಾವುದೇ ಒಂದು ಪೋಸ್ಟ್ ವೈರಲ್ ಆಗಿ ಬಳಕೆದಾರರಿಗೆ ಸಿಗುವ ರೀತಿಯಲ್ಲಿ ಬದಲಾವಣೆಗಳುಂಟಾಗಬಹುದೆಂದೂ ಸಹ ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ರೀತಿಯ ತಂತ್ರಜ್ಞಾನದ ಅಳವಡಿಕೆಯು ನಿರ್ಧಿಷ್ಟ ಸಮುದಾಯ ಅಥವಾ ವರ್ಗವನ್ನು ಗುರಿಯಾಗಿಸಿ ನೀಡಲಾಗುವ ‘ಟಾರ್ಗೆಟ್ ಆ್ಯಡ್ಸ್’ ಆದಾಯಕ್ಕೂ ಕುತ್ತು ತರುವ ಸಾಧ್ಯತೆಗಳನ್ನು ಝುಕರ್ ಬರ್ಗ್ ಕಂಡುಕೊಂಡಿದ್ದಾರೆ. ಆದಾಗ್ಯೂ ಫೇಸ್ಬುಕ್ ಬಳಕೆದಾರರ ಖಾಸಗಿತನದ ರಕ್ಷಣೆಯ ಹಿತದೃಷ್ಟಿಯಿಂದ ಈ ಎಲ್ಲಾ ಸುರಕ್ಷಾ ಕ್ರಮಗಳನ್ನು ಮುಂಬರುವ ದಿನಗಳಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ಅನಿವಾರ್ಯತೆಯನ್ನು ಝುಕರ್ ಬರ್ಗ್ ಒತ್ತಿ ಹೇಳಿದ್ದಾರೆ.

ಫೇಸ್ಬುಕ್ ತರಲುದ್ದೇಶಿಸಿರುವ ಈ ಬದಲಾವಣೆಯಿಂದಾಗಿ ಇನ್ನು ಮೆಸೆಂಜರ್ ಅಕೌಂಟ್ ಇರುವರು ವಾಟ್ಸ್ಯಾಪ್ ಬಳಕೆದಾರರೊಂದಿಗೆ ಹಾಗೂ ವಾಟ್ಸ್ಯಾಪ್ ಬಳಕೆದಾರರು ಮೆಸೆಂಜರ್ ಬಳಕೆದಾರರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಬಳಕೆದಾರರು ತಮ್ಮ ಸಂವಹನಗಳನ್ನು (ಚಾಟ್ಸ್) ಎಷ್ಟು ಸಮಯ ಇರಿಸಿಕೊಳ್ಳಬೆಕೆಂಬುದನ್ನೂ ಸಹ ತಾವೇ ನಿರ್ಧರಿಸಬಹುದಾಗಿರುತ್ತದೆ. ‘ಜಾಲತಾಣ ಬಳಕೆದಾರರು ಭವಿಷ್ಯದಲ್ಲಿ ತಾವು ನಡೆಸುವ ಸಂವಹನಗಳು ಹೆಚ್ಚೆಚ್ಚು ಖಾಸಗಿಯಾಗಿರಬೇಕು ಮತ್ತು ಸುರಕ್ಷಿತವಾಗಿರಬೇಕು ಎಂದು ಬಯಸುತ್ತಾರೆ ಮತ್ತು ತಮ್ಮ ಮಾತುಕತೆಗಳು ಹೆಚ್ಚು ಸಮಯ ಅಲ್ಲೇ ಉಳಿಸಿಕೊಳ್ಳಲು ಬಯಸುವುದಿಲ್ಲ’ ಎಂಬ ಅಭಿಪ್ರಾಯವನ್ನೂ ಸಹ ಝುಕರ್ ಬರ್ಗ್ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next