Advertisement

ಅಂಗನವಾಡಿ ಕೇಂದ್ರ ಶಿಥಿಲಾವಸ್ಥೆಗೆ

12:04 PM Aug 09, 2019 | Naveen |

ಎಂ.ಸೋಮೇಶ ಉಪ್ಪಾರ
ಮರಿಯಮ್ಮನಹಳ್ಳಿ:
ಪಟ್ಟಣದ 1ನೇ ವಾರ್ಡ್‌ ಮತ್ತು 8ನೇ ವಾರ್ಡ್‌ನ ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಶಿಥಿಲಗೊಂಡಿವೆ. ಮಕ್ಕಳ ಪೋಷಕರು ಆತಂಕದಲ್ಲಿಯೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತಿವೆ ಇದರಿಂದ ಶಾಲೆಯಲ್ಲಿ ಮಕ್ಕಳನ್ನು ಕೂಡಿಸಿಕೊಳ್ಳುವುದು ಕಷ್ಟಕರವಾಗಿದೆ.

Advertisement

8ನೇ ವಾರ್ಡ್‌ ಅಂಗನವಾಡಿ ಕೇಂದ್ರ 11ರ ಮೇಲ್ಛಾವಣಿ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಅಡುಗೆ ಕೋಣೆಯೂ ಸೋರುತ್ತಿದೆ. ಇದರಿಂದ ಮಕ್ಕಳಿಗೆ, ಗರ್ಭಿಣಿಯರಿಗೆ ಬಾಣಂತಿಯರಿಗೆ ಆಹಾರ ತಯಾರಿಸುವುದೂ ಕಷ್ಟಕರವಾಗುತ್ತಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ ಉಮಾದೇವಿ ಅವರು.

ಕೇಂದ್ರದಲ್ಲಿ 25 ಮಕ್ಕಳಿದ್ದು, ಇವರ ಮಳೆಗಾಲದಲ್ಲಿ ಮಕ್ಕಳನ್ನು ಕೂಡಿಸಿಕೊಳ್ಳುವುದು ಕಷ್ಟಕರವಾಗುತ್ತಿದೆ. ಮೇಲ್ಛಾವಣಿಯಲ್ಲಿ ನೀರು ಸೋರುತ್ತಿರುವುದರಿಂದ ವಿದ್ಯುತ್‌ ತಂತಿಗಳು ಎಲ್ಲಾದರೂ ಅಸ್ತವ್ಯಸ್ತವಾಗಿದ್ದರೆ ಅಪಾಯ ಕಟ್ಟಿಟ್ಟಬುತ್ತಿ ಅನ್ನುವಂತಿದೆ.

ಪಟ್ಟಣದಲ್ಲಿ 1 ಮತ್ತು 8ನೇ ವಾರ್ಡ್‌ನ ಎರಡು ಕೇಂದ್ರಗಳು ಶಿಥಿಲಾವಸ್ಥೆಯಲ್ಲಿದ್ದು, ಅಪಾಯ ತಂದೊಡ್ಡಲಿವೆ. ಎರಡೂ ಕಟ್ಟಡಗಳನ್ನು ಕೆಡವಲು ಲೋಕೋಪಯೋಗಿ ಇಲಾಖೆಯವರಿಗೆ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೂ ಕಳೆದ ಐದಾರು ತಿಂಗಳ ಹಿಂದೆ ಪತ್ರ ಬರೆಯಲಾಗಿದ್ದರೂ ಇಲಾಖೆಯವರಾಗಲೀ ಪಟ್ಟಣ ಪಂಚಾಯಿತಿ ಅವರಾಗಲಿ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಮರಿಯಮ್ಮನಹಳ್ಳಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಅಂಬುಜಾ ಅವರು.

ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಾವೂ ಸಹ ಲೋಕೋಪಯೋಗಿ ಇಲಾಖೆಯವರು ಕಟ್ಟಡಗಳು ಶಿಥಿಲ ಗೊಂಡಿರುವ ಬಗ್ಗೆ ಪ್ರಮಾಣ ಪತ್ರ ನೀಡಬೇಕಾಗಿದೆ. ಪ್ರಮಾಣ ಪತ್ರ ನೀಡಿದ ಮೇಲೆ ಯಾವುದಾದರೂ ಯೋಜನೆಯಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಿಕೊಡಲು ಮನವಿ ಮಾಡಿ ಕೊಳ್ಳುತ್ತೇವೆ.

Advertisement

ಸದ್ಯಕ್ಕೆ ಈ ಎರಡೂ ಅಂಗನವಾಡಿ ಕೇಂದ್ರಗಳನ್ನು ಯಾವುದಾದರೂ ಬಾಡಿಗೆ ಕಟ್ಟಡಗಳಿಗೆ ಸ್ಥಳಾಂತರಿಸಲು ಸೂಚನೆ ನೀಡುತ್ತೇವೆ ಎಂದು ಹೊಸಪೇಟೆಯ ಪ್ರಭಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುದೀಪ್‌ ಕುಮಾರ್‌.

ಪಟ್ಟಣ ಪಂಚಾಯತಿ 8ನೇ ವಾರ್ಡ್‌ನ ಸದಸ್ಯರಾದ ಎಸ್‌.ನವೀನ್‌ ಕುಮಾರ್‌ ಅವರು, ಕೂಡಲೇ ಈ ಅಂಗನವಾಡಿ ಕೇಂದ್ರವನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲು ಪ್ರಯತ್ನಿಸುತ್ತೇವೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next