Advertisement

ಜೋಡಿ ರಥೋತ್ಸವ

04:02 PM Apr 14, 2019 | Naveen |

ಮರಿಯಮ್ಮನಹಳ್ಳಿ: ಪಟ್ಟಣದ ಆರಾಧ್ಯ ದೈವರಾದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಮತ್ತು ಶ್ರೀಆಂಜನೇಯಸ್ವಾಮಿ ಜೋಡಿ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Advertisement

ಶ್ರೀರಾಮನವಮಿಯಂದು ನಡೆಯುವ ಜೋಡಿ ರಥೋತ್ಸವದ ಹಿನ್ನೆಲೆಯಲ್ಲಿ ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಮನವಮಿ ಅಂಗವಾಗಿ ರಥಾಂಗ ಹೋಮ, ಹವನಾದಿಗಳು ನಡೆದವು.

ಮಧ್ಯಾಹ್ನ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ಮತ್ತು ಆಂಜನೇಯಸ್ವಾಮಿ ಮಡಿತೇರು ನಡೆದ ನಂತರ ಸಂಜೆ ಉಭಯ ಸ್ವಾಮಿಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜೋಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳಾದ ಲೋಕಪ್ಪನಹೊಲ, ಅಯ್ಯನಹಳ್ಳಿ, ಹನುಮನಹಳ್ಳಿ, ಡಣಾಪುರ, ಡಣಾಯಕನಕೆರೆ, ನಂದಿಬಂಡಿ, ದೇವಲಾಪುರ, ಜಿ.ನಾಗಲಾಪುರ, ಗರಗ, ಬ್ಯಾಲಕುಂದಿ, ಗುಂಡಾ, ವೆಂಕಟಾಪುರ, ವ್ಯಾಸವನಕೆರೆ, ಸೇರಿದಂತೆ ಹಲವಾರು ಗ್ರಾಮಗಳ ಭಕ್ತರು ಟ್ರಾಕ್ಟರ್‌ ಬಂಡಿ, ಟ್ರಾಕ್ಸ್‌ ಮುಮತಾದ ವಾಹನಗಳ ಮೂಲಕ ತಂಡೋಪತಂಡವಾಗಿ ಆಗಮಿಸಿ ರಥೋತ್ಸವಕ್ಕೆ ಮೆರಗು ನೀಡಿದರು.

ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆಯಲ್ಲಿ ನೆಲೆಸಿರುವ ಮೂಲ ನಾಣೀಕೆರೆಯ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪಗೆ ಪಾತ್ರರಾದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಣದ ಪೊಲೀಸರು ಬಿಗಿ ಬಂದೋಬಸ್ತ್ಏರ್ಪಡಿಸಿದ್ದರು.

ಪಟಗಳ ಹರಾಜು
ಈ ಬಾರಿ ನಡೆದ ಜೋಡಿ ರಥೋತ್ಸವದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ಪಟವನ್ನು 4.10 ಲಕ್ಷ ರೂ. ಹಾಗೂ ಶ್ರೀಆಂಜನೇಯಸ್ವಾಮಿ ದೇವರ ಪಟವನ್ನು 6.15 ಲಕ್ಷ ರೂ.ಗೆ ಹರಾಜು ಕೂಗಿ ಪಡೆದು ಉಭಯ ದೇವರ ಆಶೀರ್ವಾದ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next