Advertisement

ಮಾರಿಯುಪೋಲ್ ನಿವಾಸಿಗಳನ್ನು ಬಲವಂತವಾಗಿ ಕರೆದೊಯ್ದ ರಷ್ಯಾ!

08:44 AM Mar 20, 2022 | Team Udayavani |

ಕೀವ್: ಉಕ್ರೇನ್‌ ನ ಮಾರಿಯುಪೋಲ್‌ ನ ಸಾವಿರಾರು ನಿವಾಸಿಗಳನ್ನು ಬಲವಂತವಾಗಿ ರಷ್ಯಾದ ದೂರದ ನಗರಗಳಿಗೆ ಕರೆದೊಯ್ಯಲಾಗಿದೆ. ನಾಗರಿಕರನ್ನು ಶಿಬಿರಗಳಿಗೆ ಕರೆದೊಯ್ಯಲಾಗಿತ್ತು, ಅಲ್ಲಿ ರಷ್ಯಾದ ಪಡೆಗಳು ಅವರ ಫೋನ್‌ಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ ಅವರಲ್ಲಿ ಕೆಲವರನ್ನು ರಷ್ಯಾದ ನಗರಗಳಿಗೆ ಸ್ಥಳಾಂತರಿಸಲಾಯಿತು ಎಂದು ಮಾರಿಯುಪೋಲ್ ಸಿಟಿ ಕೌನ್ಸಿಲ್ ಹೇಳಿಕೊಂಡಿದೆ.

Advertisement

ನಗರದ ಮಧ್ಯಭಾಗದಲ್ಲಿ ಕಾಳಗ ಮುಂದುವರಿದಿದ್ದು, ಫಿರಂಗಿ ಶೆಲ್ ದಾಳಿ ನಿರಂತರವಾಗಿ ಮುಂದುವರೆದಿದೆ ಎಂದು ಮೇಯರ್ ಹೇಳಿದರು. ರಷ್ಯಾದ ಪಡೆಗಳಿಂದ ಸುತ್ತುವರಿದ ನಗರದಲ್ಲಿ 300,000 ಜನರು ಒಳಗೆ ಸಿಕ್ಕಿಬಿದ್ದಿದ್ದಾರೆ, ವಿದ್ಯುತ್, ನೀರು ಮತ್ತು ಗ್ಯಾಸ್ ಸಂಪರ್ಕಗಳನ್ನು ತಡೆಯಲಾಗಿದೆ.

ಮಾರಿಯುಪೋಲ್ ಸಿಟಿ ಕೌನ್ಸಿಲ್ ಶನಿವಾರದ ಹೇಳಿಕೆಯ ಪ್ರಕಾರ, ನಗರದ ಸಾವಿರಾರು ನಿವಾಸಿಗಳನ್ನು ರಷ್ಯಾದ ಪಡೆಗಳು ಅವರ ಇಚ್ಛೆಗೆ ವಿರುದ್ಧವಾಗಿ ರಷ್ಯಾದ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ:ರಷ್ಯಾದಿಂದ ಕಚ್ಚಾ ತೈಲ : 30 ಲಕ್ಷ ಬ್ಯಾರೆಲ್‌ ತೈಲ ಖರೀದಿಗೆ ಐಒಸಿ ಒಪ್ಪಂದ

“ಕಳೆದ ವಾರದಲ್ಲಿ, ಹಲವಾರು ಸಾವಿರ ಮಾರಿಯುಪೋಲ್ ನಿವಾಸಿಗಳನ್ನು ರಷ್ಯಾದ ಪ್ರದೇಶಕ್ಕೆ ಕರೆದೊಯ್ಯಲಾಗಿದೆ. ಆಕ್ರಮಣಕಾರರು ಲಿವೊಬೆರೆಜ್ನಿ ಜಿಲ್ಲೆಯಿಂದ ಮತ್ತು ಸ್ಪೋರ್ಟ್ಸ್ ಕ್ಲಬ್ ಕಟ್ಟಡದ ಆಶ್ರಯದಿಂದ ಜನರನ್ನು ಅಕ್ರಮವಾಗಿ ಕರೆದೊಯ್ದರು. ನಿರಂತರ ಬಾಂಬ್ ದಾಳಿಯ ಕಾರಣದಿಂದ ಅಲ್ಲಿ ಸಾವಿರಕ್ಕೂ ಹೆಚ್ಚು ಜನರು (ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು) ಅಡಗಿಕೊಂಡಿದ್ದರು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Advertisement

ಮಾರಿಯುಪೋಲ್ ಮೇಯರ್ ವಾಡಿಮ್ ಬೊಯಿಚೆಂಕೊ ಮಾತನಾಡಿ, “ನಾಜಿಗಳು ಎರಡನೇ ಮಹಾಯುದ್ಧದ ಸಮಯದಲ್ಲಿ ಮಾಡಿದ ಘೋರ ಕೃತ್ಯಗಳನ್ನು ಇಂದು ರಷ್ಯನ್ ಆಕ್ರಮಣಕಾರರು ಮಾಡುತ್ತಿದ್ದಾರೆ. 21 ನೇ ಶತಮಾನದಲ್ಲಿ ಜನರು ಹಾಗೆ ಮಾಡಬಹುದು ಎಂದು ಊಹಿಸುವುದು ಕಷ್ಟ” ಎಂದು ಘಟನೆಯ ಕರಾಳತೆಯ ಬಗ್ಗೆ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next