ಕೀವ್/ಮಾಸ್ಕೋ: ಉಕ್ರೇನ್‌ನ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಪಡೆಗಳಿಗೆ, ಮರಿಯುಪೋಲ್‌ನಲ್ಲಿ ಉಕ್ರೇನಿಯರಿಗೆ ಭದ್ರಕೋಟೆಯಂತಾಗಿರುವ ಸ್ಟೀಲ್ ಸ್ಥಾವರದ ಮೇಲೆ ದಾಳಿ ನಡೆಸಬೇಡಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದಾರೆ.
ಮರಿಯುಪೋಲ್‌ನಲ್ಲಿ ಇನ್ನೂ ಸಾವಿರಾರು ಯೋಧರು ಹೋರಾಟ ನಡೆಸುತ್ತಿದ್ದಾರೆ ಎಂದು ರಷ್ಯಾದ ರಕ್ಷಣ ಸಚಿವರು ಹೇಳಿದ ಅನಂತರ ಪುಟಿನ್ ಈ ಆದೇಶ ಮಾಡಿದ್ದಾರೆ.
ಮತ್ತೂಂದೆಡೆ, ಕೀವ್‌ನ ಶವಾಗಾರಗಳಲ್ಲಿ 1,020 ಉಕ್ರೇನಿಯರ ಶವಗಳು ಬಿದ್ದಿವೆ ಎಂದು ಅಲ್ಲಿನ ಸರಕಾರ ತಿಳಿಸಿದೆ. ಅಜೋವಸ್ತಲ್‌ದಲ್ಲಿ ರಷ್ಯಾ ಪಡೆಯ ದಾಳಿಗೆ ಸಿಲುಕಿ ಗಾಯಾಳುಗಳಾಗಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅನುಕೂಲ ಮಾಡಿಕೊಡಬೇಕೆಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಇದೇ ವೇಳೆ ಸ್ಪೇನ್ ಮತ್ತು ಡೆನ್‌ಮಾರ್ಕ್‌ನ ಪ್ರಧಾನಮಂತ್ರಿ ಕೀವ್‌ಗೆ ಬಂದಿದ್ದು, ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಖಾರ್ಕಿವ್‌ನಲ್ಲಿ ರಷ್ಯಾ 15 ಶೆಲ್ ದಾಳಿ ನಡೆಸಿದ್ದು, ಐವರು ಗಾಯಾಳುಗಳಾಗಿರುವುದಾಗಿ ಅಲ್ಲಿನ ಮೇಯರ್ ಹೇಳಿದ್ದಾರೆ.
ಉಕ್ರೇನ್ ಸಹಾಯಕ್ಕೆ ನಿಂತಿರುವ ಅಮೆ ರಿಕ, 1 ಲಕ್ಷ ಉಕ್ರೇನಿಯರಿಗೆ ದೇಶದಲ್ಲಿ ವಾಸಕ್ಕೆ ಅವಕಾಶ ಮಾಡಿಕೊಡುವುದಾಗಿ ಗುರುವಾರ ತಿಳಿಸಿದೆ. ಅದರ ಜತೆ ಉಕ್ರೇನ್‌ಗೆ 800 ಮಿಲಿಯನ್ ಡಾಲರ್(60 ಸಾವಿರ ಕೋಟಿ ರೂ.) ಮೌಲ್ಯದ ಯುದ್ದೋಪಕರಣ ಕೊಡುವುದಾಗಿ ಹೇಳಿದೆ.