ಬೆಂಗಳೂರು: ಸೀರೆ ಮಾರಾಟಗಾರರ ಸೋಗಿನಲ್ಲಿ ಗಾಂಜಾ ಮಾರಾಟ ಮಾಡು ತ್ತಿದ್ದ ಮೂವರು ಅಂತಾರಾಜ್ಯ ದಂಧೆಕೋರರು ಸೇರಿ ಐವರು ಯಶವಂತಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ಮೂಲದ ಕಾಳ ಪಾಲಿ ನಾಗೇಂದ್ರ (32), ವಿಶಾಖಪಟ್ಟಣಂನ ಜಮೀಲ್ ಅಲಿಯಾಸ್ ಶಿವ(29), ರಾಮಣ್ಣ (32), ಸ್ಥಳೀಯ ನಿವಾಸಿಗಳಾದ ಕಿರಣ್ (28), ಮಣಿಕಂಠ (31) ಬಂಧಿತರು.
ಆರೋಪಿಗಳಿಂದ 53.05 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಯಶವಂತ ಪುರ ಠಾಣೆ ವ್ಯಾಪ್ತಿಯ ಜಯರಾಮ್ ಕಾಲೋನಿ, ಕೆನರಾ ಯೂನಿಯಲ್ ರಸ್ತೆ ಹಾಗೂ ಇತರೆಡೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಆಂಧ್ರಪ್ರದೇಶ ಮೂಲದ ಆರೋಪಿಗಳು ಕಾಕಿನಾಡ ಮೂಲದ ವ್ಯಕ್ತಿಯಿಂದ ಕಡಿಮೆ ಮೊತ್ತಕ್ಕೆ ಗಾಂಜಾ ಖರೀದಿಸಿ, ಅವುಗಳನ್ನು ಚಿಕ್ಕ ಪ್ಯಾಕ್ ಗಳನ್ನಾಗಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಆಂಧ್ರಪ್ರದೇಶ ದಿಂದ ಗಾಂಜಾ ತರುವಾಗ ದೊಡ್ಡ ಬ್ಯಾಗ್ ಗಳ ಕೆಳಭಾಗದಲ್ಲಿ ಗಾಂಜಾ ಪ್ಯಾಕೆ ಟ್ ಗಳನ್ನು ಇಟ್ಟು, ಮೇಲ್ಭಾಗದಲ್ಲಿ ಸೀರೆಗಳನ್ನು ತುಂಬಿ, ಖಾಸಗಿ ಬಸ್ ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಸೀರೆಮಾರಾಟಗಾರರ ಸೋಗಿನಲ್ಲಿ ಬಂದು ಕಿರಣ್ ಮತ್ತು ಮಣಿಕಂಠನಿಗೆ ಕೊಟ್ಟು ಹೋಗುತ್ತಿದ್ದರು. ಇತ್ತೀಚೆಗೆ ಠಾಣೆ ವ್ಯಾಪ್ತಿಯ ಜಯರಾಮ ಕಾಲೋನಿಯಲ್ಲಿ ಗಾಂಜಾ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದರು. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.