Advertisement

ಗಾಂಜಾ ಕೇಸಲ್ಲಿ ಗುಪ್ತಚರ ಪೇದೆಯೇ ಸಿಕ್ಕಿಬಿದ್ದ!

06:30 AM Jan 31, 2018 | Harsha Rao |

ಬೆಂಗಳೂರು: ಗಾಂಜಾ ದಾಸ್ತಾನು ನೆಪದಲ್ಲಿ ಎಂ.ಎಸ್‌.ರಾಮಯ್ಯ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಲು ಯತ್ನಿಸಿದ್ದ  ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಪೇದೆ ಸಹಿತ ನಾಲ್ವರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ರಾಜ್ಯ ಗುಪ್ತಚರ ಇಲಾಖೆಯ ವಿಐಪಿ ವಿಭಾಗದ ಬುಲೆಟ್‌ ಪ್ರೂಫ್ ವಾಹನ ಚಾಲಕ ಬಾಬು, ಗೌತಮಪುರದ ಎಸ್‌. ಪೂವಾ (42), ದೀನಬಂಧು ನಗರದ ಗೋಪಿನಾಥ್‌ (25), ಲಕ್ಷಿ$¾àಪುರದ ಸೇಲ್ವಂ (45) ಬಂಧಿತರು. ಆರೋಪಿಗಳಿಂದ ಒಂದು ಆಟೋ ರಿûಾ ವಶಕ್ಕೆ ಪಡೆಯಲಾಗಿದೆ.

ಜ.20ರಂದು ಕೊಡಿಗೇಹಳ್ಳಿಯ ಲೊಟ್ಟೆಗೊಲ್ಲ ಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಎಂ.ಎಸ್‌.ರಾಮಯ್ಯ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿ ಅಮಿತ್‌ ಹಾಗೂ ಆತನ ಸ್ನೇಹಿತರು ತಂಗಿದ್ದ ಕೊಠಡಿಗೆ ರಾತ್ರಿ 10 ಗಂಟೆ ಸುಮಾರಿಗೆ ಆರೋಪಿಗಳು ಗುಪ್ತಚರ ಇಲಾಖೆ ಪೇದೆ ಸ್ನೇಹಿತರ ಜತೆ ಸೇರಿ ದಾಳಿ ನಡೆಸಿದ್ದಾನೆ. ಬಳಿಕ ವಿದ್ಯಾರ್ಥಿಗಳ ಕೊಠಡಿಯಲ್ಲಿದ್ದ 200 ಗ್ರಾಂ ಗಾಂಜಾ ಮತ್ತು ಗಾಂಜಾ ಮಾರಾಟಗಾರ ನೌಶಿನ್‌ನನ್ನು ವಶಕ್ಕೆ ಪಡೆದು ಬೆದರಿಸಿದ್ದಾರೆ. ಬಳಿಕ ಮುಖ್ಯ ಪೇದೆ ಬಾಬು, ವಿದ್ಯಾರ್ಥಿಗಳಿಗೆ 3 ಲ.ರೂ. ಕೊಡದಿದ್ದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದಾನೆ. ಆತಂಕಗೊಂಡ ವಿದ್ಯಾರ್ಥಿಗಳು 50,000 ರೂ. ಕೊಡುವುದಾಗಿ ಒಪ್ಪಿಕೊಂಡಿದ್ದು, ಮುಂಗಡವಾಗಿ 15 ಸಾವಿರ ರೂ. ಕೊಟ್ಟಿದ್ದಾರೆ. ಅನಂತರ ಮಲ್ಲೇಶ್ವರಂನಲ್ಲಿರುವ ಸ್ನೇಹಿತರ ಬಳಿ ಇನ್ನುಳಿದ ಹಣ ಕೊಡಿಸುವುದಾಗಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ತಾವೇ ತಂದಿದ್ದ ಆಟೋ ರಿûಾದಲ್ಲಿ ಸದಾಶಿವನಗರದ ಬಿಇಎಲ್‌ ಬಳಿಯ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕರೆದೊಯ್ದು, ಸ್ನೇಹಿತರನ್ನು ಕರೆಸುವಂತೆ ವಿದ್ಯಾರ್ಥಿಗಳ ಮೂಲಕ ಕರೆ ಮಾಡಿಸಿದ್ದಾರೆ. ಬಳಿಕ ಅಮಿತ್‌ ಹಾಗೂ ಇತರ ವಿದ್ಯಾರ್ಥಿಗಳನ್ನು ಆಟೋದಲ್ಲೇ ಕೂರಿಸಿಕೊಂಡು ಹಲ್ಲೆ ನಡೆಸಿದ್ದು, ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೇದೆಗಳಾದ ಅಶ್ವತ್ಥ ರೆಡ್ಡಿ ಮತ್ತು ಕೃಷ್ಣಪ್ಪ ಗಲಾಟೆ ಕೇಳಿ ಆಟೋ ಬಳಿ ಹೋಗಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂತು.

ಅಧಿಕಾರವಿಲ್ಲದಿದ್ದರೂ ದಾಳಿ!
ರಾಜ್ಯ ಗುಪ್ತಚರ ಇಲಾಖೆಯ ಸಿಬಂದಿಗೆ ಯಾವುದೇ ದಾಳಿ ನಡೆಸುವ ಅಧಿಕಾರವಿಲ್ಲ. ಆದರೂ ದಾಳಿ ನಡೆಸಿದ್ದಲ್ಲದೆ, ವಿದ್ಯಾರ್ಥಿಗಳು ಹಾಗೂ ದಂಧೆಕೋರರ ಮೇಲೆ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಆರೋಪದ ಮೇಲೆ ಮೂವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇದೇ ವೇಳೆ ಗಾಂಜಾ ಮಾರಾಟ  ಆರೋಪದ ಮೇಲೆ 
ದಂಧೆಕೋರ ನೌಶಿನ್‌ ಮತ್ತು ಈತನ ಸಹಚರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next