Advertisement

Marijuana: ಗಾಂಜಾ ಸೇವನೆ; ಆರು ಮಂದಿ ವಶ

12:43 AM Aug 11, 2023 | Team Udayavani |

ಮಂಗಳೂರು: ಇಬ್ಬರ ವಶ
ಮಂಗಳೂರು: ಮಂಗಳೂರು ತಾಲೂಕಿನ ಮಲ್ಲೂರು ಬದ್ರಿಯಾ ನಗರದ ಬಳಿ ಅಮಲು ಪದಾರ್ಥ ಗಾಂಜಾ ಸೇವನೆ ಮಾಡಿದ ಇಬ್ಬರನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಮಲ್ಲೂರು ಬದ್ರಿಯಾ ನಗರದ ಮಹಮ್ಮದ್‌ ತಮೀಮ್‌ (35) ಮತ್ತು ಪಣಂಬೂರು ಗ್ರಾಮ ಕಸಬ ಬೆಂಗ್ರೆಯ ಮೊಹಮ್ಮದ್‌ ಶಾಫಿ ಯಾನೆ ಜಾಫಿರ್‌ (25) ಬಂಧಿತ ಆರೋಪಿಗಳು.
ಠಾಣಾ ನಿರೀಕ್ಷಕ ಜಾನ್ಸನ್‌ ಡಿ’ಸೋಜಾ ಅವರು ಸಿಬಂದಿಯೊಂದಿಗೆ ಬುಧವಾರ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿ ತೆರಳುತಿದ್ದ ವೇಳೆ ಮಲ್ಲೂರು ಗ್ರಾಮದ ಬದ್ರಿಯಾ ನಗರದ ಬಳಿ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಈ ಇಬ್ಬರು ನಶೆಯಲ್ಲಿರುವುದು ಕಂಡು ಬಂದಿದೆ.

ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕಾರ್ಕಳದಲ್ಲಿ ಇಬ್ಬರು ವಶಕ್ಕೆ
ಕಾರ್ಕಳ: ಮಿಯ್ನಾರು ನೆಲ್ಲಿಗುಡ್ಡೆ ಹಾಗೂ ಕಸಬಾದ ಚತುರ್ಮುಖ ಬಸದಿ ಬಳಿ ಮಾದಕ ದ್ರವ್ಯ ಗಾಂಜಾ ಸೇವನೆ ಹಾಗೂ ಮಾರಾಟಕ್ಕೆ ಪ್ರಯತ್ನಿಸುತಿದ್ದ ಇಬ್ಬರನ್ನು ಕಾರ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೆಲ್ಲಿಗುಡ್ಡೆ ಅಡ್ಡರಸ್ತೆಯ ವೇಲುಮುರುಗನ್‌ ಹಾಗೂ ಗಿರೀಶ್‌ ಬಂಧಿತರು. ಮಿಯ್ನಾರು ಗ್ರಾಮದ ನೆಲ್ಲಿಗುಡ್ಡೆಯ ಕಂಬಳ ನಡೆಯುವ ಸ್ಥಳದ ಬಳಿ ಗಾಂಜಾ ಪೇಪರ್‌ನಲ್ಲಿ ಸೇರಿಸಿ ಸಿಗರೇಟ್‌ ರೋಲ್‌ ಮಾಡಿ ವೇಲುಮುರುಗನ್‌ ಸೇದುತ್ತಿದ್ದ. ಗಿರೀಶ್‌ ಕಸಬಾ ಗ್ರಾಮದ ಆನೆಕೆರೆ ಬಳಿ ಗಾಂಜಾ ಸೇದುತ್ತಿದ್ದ. ಕಾರ್ಕಳ ಪಿಎಸ್‌ಐ ಸಂದೀಪ್‌ ಕುಮಾರ್‌ ನೇತೃತ್ವದಲ್ಲಿ ದಾಳಿ ನಡೆದಿತ್ತು, ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಣಿಪಾಲದಲ್ಲಿ ಇಬ್ಬರು ವಶಕ್ಕೆ
ಮಣಿಪಾಲ: ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯತೀಶ್‌ ಕುಮಾರ್‌ ಪೈ (24) ಹಾಗೂ ಶರಣ್‌ (26)ನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಫಾರೆನ್ಸಿಕ್‌ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ.

 

Advertisement

Udayavani is now on Telegram. Click here to join our channel and stay updated with the latest news.

Next