Advertisement

ಪ್ರತ್ಯೇಕ ವಾಸದ ನಿಯಮ ಮೀರಿದ ಮೇರಿ ಕಾಮ್‌

10:36 PM Mar 21, 2020 | Sriram |

ಹೊಸದಿಲ್ಲಿ: 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರಬೇಕೆಂದು ಸೂಚಿಸಲಾಗಿದ್ದರೂ, ರಾಜ್ಯಸಭಾ ಸದಸ್ಯೆ, ಬಾಕ್ಸರ್‌ ಮೇರಿ ಕೋಮ್‌ ಆ ನಿಯಮ ಮುರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್‌ನಲ್ಲಿ ಭಾಗವಹಿಸಿದ ಅವರು ಮಾ. 13ರಂದು ಭಾರತಕ್ಕೆ ಮರಳಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ಅವರು ಪ್ರತ್ಯೇಕವಾಗಿದ್ದರು. ಆದರೆ ಮಾ.18ರಂದು ರಾಷ್ಟ್ರಪತಿಗಳು ಉತ್ತರಪ್ರದೇಶ ಹಾಗೂ ರಾಜಸ್ಥಾನದಿಂದ ಆಯ್ಕೆಯಾದ ಸದಸ್ಯರಿಗೆ ನೀಡಿದ್ದ ಔತಣಕೂಟಕ್ಕೆ ಹಾಜರಾಗಿದ್ದರು. ಇದು ರಾಷ್ಟ್ರಪತಿಗಳ ಟ್ವೀಟರ್‌ ಖಾತೆಯ ಚಿತ್ರದ ಮೂಲಕ ಬಹಿರಂಗಗೊಂಡಿದೆ!

ಅದೇ ದಿನ ಬಿಜೆಪಿ ನಾಯಕ ದುಶ್ಯಂತ್‌ ಸಿಂಗ್‌ ಕೂಡ ರಾಷ್ಟ್ರಪತಿ ಭವನದಲ್ಲಿದ್ದರು. ದುಶ್ಯಂತ್‌, ಸೋಂಕಿತೆ ಕನಿಕಾ ಕಪೂರ್‌ ಅವರನ್ನು ಸಂಪರ್ಕಿಸಿದ್ದರು ಎನ್ನುವುದನ್ನು ಗಮನಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next