Advertisement

ಟೆನ್ನಿಸ್‌ ಲೋಕದ ಬೆಡಗಿ ಮರಿಯಾ ಶರಪೋವಾ

10:06 AM Mar 06, 2020 | mahesh |

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

Advertisement

1. ಇತ್ತೀಚಿಗಷ್ಟೆ ವೃತ್ತಿಪರ ಟೆನ್ನಿಸ್‌ ಬದುಕಿನಿಂದ ನಿವೃತ್ತರಾದ ಕ್ರೀಡಾಪಟು ಮರಿಯಾ ಶರಪೋವಾ, ರಷ್ಯಾದ ನ್ಯಾಗನ್‌ ಎಂಬಲ್ಲಿ ಏಪ್ರಿಲ್‌ 19, 1987ರಂದು ಜನಿಸಿದರು.

2. ಅವರು ಹುಟ್ಟಿದಾಗ ಶೆರ್ನೋಬಿಲ್‌ ಅಣುದುರಂತದಿಂದಾಗಿ ಮರಿಯಾ ಕುಟುಂಬ, ಹುಟ್ಟೂರನ್ನು ತೊರೆಯಬೇಕಾಗಿ ಬಂದಿತ್ತು.

3. ಮರಿಯಾ 6ವರ್ಷದವಳಿದ್ದಾಗ ಮತ್ತೋರ್ವ ಹಿರಿಯ ಟೆನ್ನಿಸ್‌ಪಟು ಮಾರ್ಟಿನಾ ನವ್ರಾಟಿಲೋವಾ ಅವರು ಆಕೆಯನ್ನು ಅಮೆರಿಕದ ತರಬೇತಿ ಕೇಂದ್ರಕ್ಕೆ ಸೇರುವಂತೆ ಶಿಫಾರಸ್ಸು ಮಾಡಿದ್ದರು.

4. ಖ್ಯಾತ ಪಾದರಕ್ಷೆ ತಯಾರಿಕಾ ಸಂಸ್ಥೆ ನೈಕಿ ಜೊತೆ ಜಾಹೀರಾತು ಒಪ್ಪಂದ ಮಾಡಿಕೊಂಡಾಗ ಮರಿಯಾಗೆ 11 ವರ್ಷ ವಯಸ್ಸು.

Advertisement

5. ಅಮೆರಿಕದಲ್ಲಿ ಮರಿಯಾ ಟೆನ್ನಿಸ್‌ ತರಬೇತಿ ಪಡೆಯವಾಗ ಅವರ ತಂದೆ ಹಲವೆಡೆಗಳಲ್ಲಿ ರಾತ್ರಿ ಪಾಳಿಗಳಲ್ಲಿ ನಾನಾ ಕೆಲಸಗಳನ್ನು ನಿರ್ವಹಿಸುತ್ತಿದ್ದರು.

6. ಅವರು ಕ್ರೀಡಾಪಟು ಮಾತ್ರವಷ್ಟೇ ಆಗಿರಲಿಲ್ಲ, ಮಾಡೆಲಿಂಗ್‌ ಕೂಡಾ ಮಾಡುತ್ತಿದ್ದರು.

7. ಅವರು “ಶುಗರ್‌ಪೋವಾ’ ಎನ್ನುವ ಚಾಕಲೇಟು ತಯಾರಿಕಾ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.

8. ಮೊತ್ತಮೊದಲ ಬಾರಿಗೆ ಮರಿಯಾ ಪ್ರತಿಷ್ಠಿತ ವಿಂಬಲ್ಡನ್‌ ಪ್ರಶಸ್ತಿಯನ್ನು ತಮ್ಮ 18ನೇ ವಯಸ್ಸಿನಲ್ಲಿಯೇ ಗೆದ್ದಿದ್ದರು.

9. ಮರಿಯಾ 2003ರಿಂದ 2015ರ ನಡುವೆ ಸತತವಾಗಿ ವರ್ಷಕ್ಕೆ ಕನಿಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

10. ಜಗತ್ತಿನ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮರಿಯಾ ತಮ್ಮ ಸಂಪತ್ತಿನ ಗಣನೀಯ ಪ್ರಮಾಣವನ್ನು ದೇಣಿಗೆ ರೂಪದಲ್ಲಿ ಸಹಾಯಾರ್ಥವಾಗಿ ನೀಡುತ್ತಾ ಬಂದಿದ್ದಾರೆ.

ಸಂಗ್ರಹ ಪ್ರಿಯಾಂಕ

Advertisement

Udayavani is now on Telegram. Click here to join our channel and stay updated with the latest news.

Next