Advertisement
ಕುಂದಾಪುರ ಕಡೆಗೆ ಹೋಗುವ ಬಸ್‌ಗಳು ಈ ತಂಗುದಾಣದಿಂದ ತುಸು ಮುಂದೆ ನಿಲ್ಲುತ್ತವೆಯಾದ್ದರಿಂದ ತಂಗುದಾಣದಲ್ಲಿ ಯಾವ ಪ್ರಯಾಣಿಕರೂ ಇಲ್ಲಿ ನಿಲ್ಲುವುದಿಲ್ಲ. ಆದ್ದರಿಂದ ಮಾರ್ಗೋಳಿ ಶ್ಮಶಾನ ಬಳಿಯ ತಂಗುದಾಣ ಬಿಕೋ ಎನ್ನುತ್ತಿದೆ. ನಾನು ನಿತ್ಯವೂ ಕೆಲಸಕ್ಕೆ ಕುಂದಾಪುರಕ್ಕೆ ಹೋಗುವವನು. ಆ ಕಾರಣದಿಂದ ಬಸ್‌ಗಾಗಿ ಬಸ್ ನಿಲ್ಲುವ ಸ್ಥಳದಲ್ಲೆ ನಿಂತಿರುತ್ತೇನೆ. ಯಾಕೆಂದರೆ ತಂಗುದಾಣದ ಬಳಿ ಬಸ್ ನಿಲ್ಲುವುದಿಲ್ಲ ಎನ್ನುತ್ತಾರೆ ಮಾರ್ಗೋಳಿಯ ನಿವಾಸಿ ನಾರಾಯಣ.
ಖಾಸಗಿ ಮತ್ತು ಸರಕಾರಿ ಬಸ್‌ಗಳು ಹಿಂದೆ ಈಗಿರುವ ತಂಗುದಾಣದ ಎದುರೇ ನಿಲ್ಲುತ್ತಿತ್ತು. ಆದರೆ ಈಗ ಇಗರ್ಜಿ ಎದುರು ನಿಲ್ಲುತ್ತಿರುವುದರಿಂದ ಪ್ರಯಾಣಿಕರೂ ಅಲ್ಲಿಯೇ ನಿಲ್ಲುತ್ತಾರೆ. ಹಾಗಾಗಿ ಈಗ ತಂಗುದಾಣ ಅಲ್ಲಿ ಅಗತ್ಯವಿಲ್ಲವಾಗಿದೆ. ಕುಂದಾಪುರದ ಕಡೆಗೆ ಸಾಗುವ ಬಸ್‌ಗಳು ಮಾರ್ಗೋಳಿಯಲ್ಲಿರುವ ತಂಗುದಾಣದ ಸಮೀಪ ನಿಂತರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. -ನಾಗರಾಜ ಗಾಣಿಗ ಸಂತೆಕಟ್ಟೆ, ಅಧ್ಯಕ್ಷರು, ಗ್ರಾ.ಪಂ. ಬಸ್ರೂರು.