Advertisement

ಅರಣ್ಯವಾಸಿಗಳಿಗೆ ಭೂಮಿ ಹಕ್ಕು ದೊರಕದಿರುವುದು ವಿಷಾದಕರ : ಮಾರ್ಗರೇಟ್ ಆಳ್ವ ವಿಷಾದ

02:50 PM Mar 04, 2022 | Team Udayavani |

ಶಿರಸಿ : ಸುಪ್ರೀಂ ಕೋರ್ಟ್ ನಲ್ಲಿನ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಸುಪ್ರೀಂ ಕೋರ್ಟ್ ನಲ್ಲಿ ಅರಣ್ಯವಾಸಿಗಳ ವಿರುದ್ಧ ವ್ಯತಿರಿಕ್ತವಾದ ಆದೇಶ ಬಾರದ ರೀತಿಯಲ್ಲಿ ತೀವ್ರ ನಿಗಾವಹಿಸುವುದು ಅತೀ ಅವಶ್ಯ ಎಂದು‌ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಆಗ್ರಹಿಸಿದರು.

Advertisement

ಅವರು ಹೋರಾಟಗಾರ ಏ.ರವೀಂದ್ರ ನಾಯ್ಕ ಅವರ ಹೋರಾಟ 30 ವರ್ಷದ ಕುರಿತು ಕೃತಿ ವೀಕ್ಷಸಿ ಮಾತನಾಡಿದರು. ಅರಣ್ಯವಾಸಿಗಳ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಸರಕಾರದ ಕ್ರಮ ಅಗತ್ಯ ಎಂದ ಅವರು,

ಕೆನರಾ ಕ್ಷೇತ್ರದ ಸಂಸದೆ ಆಗಿರುವ ಸಂದರ್ಭದಲ್ಲಿ ಲೋಕಸಭಾ ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನಕ್ಕೆ ತಂದಿದ್ದೆ. ನಂತರ, ಅರಣ್ಯ ಹಕ್ಕು ಕಾಯಿದೆ ಜಾರಿಗೆ ತರುವ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರೊಂದಿಗೆ ಸಮಾಲೋಚಿಸಿದ ವಿಷಯವನ್ನು ವಿಶ್ಲೇಷಿಸಿದರು.

ಇಂದಿಗೂ ಈ ಕಾಯಿದೆ ಮೂಲಕ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ದೊರಕದಿರುವುದು ವಿಷಾದಕರ ಎಂದೂ ತಿಳಿಸಿದರು.

ಇದನ್ನೂ ಓದಿ : State Budget: ಮುಂದಿನ ವರ್ಷದಿಂದಲೇ NEP ಜಾರಿ: ಶಿಕ್ಷಣ ಕ್ಷೇತ್ರಕ್ಕೆ ಸಿಎಂ ಘೋಷಿಸಿದ್ದೇನು?

Advertisement
Advertisement

Udayavani is now on Telegram. Click here to join our channel and stay updated with the latest news.

Next