Advertisement
ಕಾಮಗಾರಿಯಿಂದಾಗಿ ಬಿಳಿನೆಲೆಯಿಂದ ಕೈಕಂಬದ ತನಕ ಅಲ್ಲಲ್ಲಿ ಡಾಮರು ರಸ್ತೆಗೆ ಹಾನಿಯಾಗಿದೆ. ಕೆಲವೆಡೆ ರಸ್ತೆಯಂಚಿನಲ್ಲೇ ಗುಂಡಿ ತೆಗೆದು ಕೇಬಲ್ ಹಾಕಿ ಮಣ್ಣು ಮುಚ್ಚಲಾಗಿದೆ. ವಾಹನಗಳು ಸೈಡ್ ಕೊಡುವ ವೇಳೆ ಚಕ್ರಗಳು ಹೂತು ಹೋಗಿ ತೊಂದರೆಯುಂಟಾಗಿದೆ. ಹೊಂಡದ ಮಣ್ಣು ರಸ್ತೆಗೆ ಬಿದ್ದು ಮಳೆ ಬಂದಾಗ ರಸ್ತೆ ಕೆಸರುಮಯವಾಗುತ್ತಿದೆ.
ರಾತ್ರಿ ವೇಳೆ ವಾಹನ ಚಾಲಕರಿಗೆ ಅನುಕೂಲವಾಗುವಂತೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಅಳವಡಿಸಲಾಗಿದ್ದ ರಿಫ್ಲೆಕ್ಟರ್‌ಗಳನ್ನು ಕಾಮಗಾರಿಯ ವೇಳೆ ಕಿತ್ತು ಹಾಕಲಾಗಿದ್ದು, ಮತ್ತೆ ಅಳವಡಿಸಿಲ್ಲ. ಅದರಿಂದಾಗಿ ರಾತ್ರಿ ವೇಳೆ ವಾಹನ ಚಲಾಯಿಸುವ ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆಗೆ ಹಾನಿಯಾಗುವಂತೆ ಕಾಮಗಾರಿ ನಡೆಸುತ್ತಿರುವ ಖಾಸಗಿ ಟೆಲಿಕಾಂ ಕಂಪೆನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ರಸ್ತೆಯನ್ನು ಮತ್ತೆ ಸುಸ್ಥಿತಿಗೆ ತರುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕ್ರಮ ಕೈಗೊಂಡಿದ್ದೇವೆ
ಕಂಪೆನಿಯವರು ಇಲಾಖೆಗೆ ನಿಗದಿತ ಶುಲ್ಕ ಪಾವತಿಸಿ ಕೇಬಲ್ ಅಳವಡಿಸುವ ಕಾಮಗಾರಿ ನಡೆಸುತ್ತಿದ್ದಾರೆ. ರಸ್ತೆಗೆ ಹಾನಿ ಮಾಡದಂತೆ ಷರತ್ತು ವಿಧಿಸಿ ಅನುಮತಿ ನೀಡಲಾಗಿತ್ತು. ಕೆಲಸ ನಿರ್ವಹಿಸುವ ವೇಳೆಯಲ್ಲಿ ಅವರು ರಸ್ತೆಗೆ ಹಾನಿ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಅದರಂತೆ ನಮ್ಮ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಂಪೆನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿ ಕಾಮಗಾರಿಯನ್ನು ನಿಲ್ಲಿಸಿದ್ದರು. ಆನಂತರದಲ್ಲಿ ಹಾನಿಯಾಗಿರುವ ರಸ್ತೆಯನ್ನು ಸರಿ ಪಡಿಸಿಕೊಡುವ ಭರವಸೆ ನೀಡಿ ಕಂಪೆನಿಯವರು ಕಾಮಗಾರಿ ನಡೆಸುತ್ತಿದ್ದಾರೆ. ಹಾನಿಯಾಗಿರುವ ರಸ್ತೆಯ ಭಾಗವನ್ನು ಕಂಪೆನಿಯವರಿಂದಲೇ ದುರಸ್ತಿಪಡಿಸಲು ಕ್ರಮ ಕೈಗೊಂಡಿದ್ದೇವೆ.
– ಪ್ರಮೋದ್‌ಕುಮಾರ್ ಕೆ.ಕೆ.,
ಪಿಡಬ್ಲ್ಯುಡಿ ಎಇ, ಪುತ್ತೂರು