Advertisement

ಮಾ. 31ರೊಳಗೆ ಬಿಎಸ್‌-4 ವಾಹನಗಳ ನೋಂದಣಿ ಕಡ್ಡಾಯ

12:42 AM Mar 15, 2020 | Sriram |

ಮಂಗಳೂರು: ಪರಿಸರ ಮಾಲಿನ್ಯ ಕಡಿಮೆಗೊಳಿಸಲು ಎ. 1ರಿಂದ “ಭಾರತ್‌ ಸ್ಟೇಜ್‌-6′ (ಬಿಎಸ್‌-6) ವಾಹನಗಳನ್ನು ಮಾತ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಲಾಗುವುದು ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಎ. ರಾಮಕೃಷ್ಣ ರೈ ಅವರ ಪ್ರಕಟನೆ ತಿಳಿಸಿದೆ.

Advertisement

ಸುಪ್ರೀಂ ಕೋರ್ಟ್‌ ಹಾಗೂ ಸಾರಿಗೆ ಆಯುಕ್ತರ ಆದೇಶದ ಅನ್ವಯ ಎ. 1ರಿಂದ ಭಾರತ್‌ ಸ್ಟೇಜ್‌-4 (ಬಿಎಸ್‌-4) ಮಾಪನದ ವಾಹನ ಮಾರಾಟ ಹಾಗೂ ನೋಂದಣಿ ಮಾಡುವಂತಿಲ್ಲ. ಹೀಗಾಗಿ ಬಿಎಸ್‌-4 ಮಾಪನದ ವಾಹನಗಳನ್ನು ಖರೀದಿಸಿ, ಇದುವರೆಗೂ ನೋಂದಣಿ ಮಾಡಿಸಿಕೊಳ್ಳದೇ ಇರುವವರು ವಾಹನಗಳ ದಾಖಲೆಗಳನ್ನು ಸಲ್ಲಿಸಿ ಮಾ. 31ರೊಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹಲವು ಜೆಸಿಬಿ, ಎಕ್ಸವೇಟರ್‌, ಕ್ರೇನ್‌ ಹಾಗೂ ಇನ್ನಿತರ ಸಾರಿಗೆ/ಖಾಸಗಿ ವಾಹನಗಳು ಇದುವರೆಗೂ ನೋಂದಾಯಿಸದೇ ಇರುವುದು ಗಮನಕ್ಕೆ ಬಂದಿದೆ. ಅಂತಹ ವಾಹನಗಳ ಮಾಲೀಕರು, ತಮ್ಮ ವಾಹನಗಳ ದಾಖಲಾತಿ ಸಲ್ಲಿಸಿ, ಮಾ. 31ರೊಳಗೆ ನೋಂದಾಯಿಸಿ ಕೊಳ್ಳಬೇಕು. ಎ. 1ರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಭಾರತ್‌-ಸ್ಟೇಜ್‌-6(ಬಿಎಸ್‌6) ವಾಹನಗಳನ್ನು ಮಾತ್ರ ನೋಂದಣಿ ಮಾಡಿಕೊಳ್ಳಲಾಗುವುದು. ಈಗಾಗಲೇ ತಾತ್ಕಾಲಿಕ ನೋಂದಣಿ ಹೊಂದಿದ್ದರೂ ಸಹ ಅಂತಹ ವಾಹನಗಳನ್ನು ಮಾ. 31ರೊಳಗೆ ನೋಂದಾಯಿಸಿಕೊಳ್ಳಬೇಕು. ಅನಂತರ ನೋಂದಣಿ ರಹಿತ ಭಾರತ್‌ ಸ್ಟೇಜ್‌-4 ವಾಹನಗಳು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡು ಬಂದಲ್ಲಿ ಅಂತಹ ವಾಹನಗಳ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next