ಮಂಗಳೂರು: ಬ್ರಹ್ಮಾವರ ಮೂವೀಸ್ ಸಂಸ್ಥೆ ನಿರ್ಮಾಣದ ತುಳು ಚಲನಚಿತ್ರ ಚಿತ್ರ “ಕಟಪಾಡಿ ಕಟ್ಟಪ್ಪ’ ಮಾ. 29ರಂದು ದೇಶಾದ್ಯಂತ 200 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ತುಳು ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ಸಾಮಾನ್ಯ ತುಳು ಚಿತ್ರಗಳು ಬಿಡುಗಡೆಯಾಗುತ್ತಿರುವುದು ಮಾತ್ರ ವಲ್ಲದೆ ಹೊಸ ಊರುಗಳಲ್ಲಿ ಕೂಡ ಚಿತ್ರ ತೆರೆ ಕಾಣಲಿದೆ ಎಂದು ಚಿತ್ರ ನಿರ್ಮಾಪಕ ರಾಜೇಶ್ ಬ್ರಹ್ಮಾವರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಟ, ನಿರ್ದೇಶಕ ಜೆ.ಪಿ. ತೂಮಿನಾಡು ಚಿತ್ರವನ್ನು ನಿರ್ದೇ ಶಿಸಿದ್ದಾರೆ. ವಿಜಯ ಕುಮಾರ್ ಕೊಡಿಯಾಲಬೈಲ್, ಉದಯ ಪೂಜಾರಿ, ಯಜ್ಞೆàಶ್ವರ್ ಬರ್ಕೆ, ಪಮ್ಮಿ ಕೊಡಿಯಾಲಬೈಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಸೂರಜ್ ಪಾಂಡೇಶ್ವರ, ಧೀರಜ್ ನೀರುಮಾರ್ಗ, ರಂಜಿತಾ ಶೇಟ್, ದೀಪ್ತಿ ರಾವ್, ಪ್ರೇಮ್ ಶೆಟ್ಟಿ ಮುಂಬಯಿ, ನಿವೇದಿತಾ, ಸತೀಶ್ ಬಲ್ಮಠ ಮತ್ತು ನಾಯಕಿಯಾಗಿ ಚರಿಷ್ಮಾ ಸಾಲಿಯಾನ್ ನಟಿಸಿದ್ದಾರೆ.
ಕರಾವಳಿಯ ತುಳುನಾಡು, ಕರ್ನಾಟಕ, ಮುಂಬಯಿ ಮಾತ್ರವಲ್ಲದೆ ಛತ್ತೀಸ್‌ಗಢ, ಹೊಸದಿಲ್ಲಿ, ಹೈದರಾ ಬಾದ್ ನಗರಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಎಪ್ರಿಲ್‌ನಲ್ಲಿ ಸಿಂಗಾಪುರ, ಶ್ರೀಲಂಕಾ
ದೇಶಗಳಲ್ಲಿ ತೆರೆಕಾಣಲಿದೆ. ಚಿತ್ರದ 240ಕ್ಕೂ ಅಧಿಕ ಶೋಗಳು ಈಗಾಗಲೇ ಬುಕ್ ಆಗಿವೆ ಎಂದವರು ತಿಳಿಸಿದರು.
ಚಿತ್ರದ ಛಾಯಾಗ್ರಹಣವನ್ನು ರುದ್ರಮುನಿ ಬೆಳಗೆರೆ ನಡೆಸಿದ್ದಾರೆ. ಪ್ರಕಾಶ ಹಾಗೂ ಲೋಯ್ ಅವರು ಸಂಗೀತ ನೀಡಿದ್ದಾರೆ. ಸಂಕಲನವನ್ನು ಗಣೇಶ್ ನೀರ್ಚಾಲು ನಿರ್ವಹಿಸಿದ್ದಾರೆ. ವಸ್ತ್ರಾಲಂಕಾರವನ್ನು ಶರತ್ ಪೂಜಾರಿ ಬರ್ಕೆ ಒದಗಿಸಿದ್ದಾರೆ ಎಂದರು.
ಚಲನಚಿತ್ರ ನಿರ್ದೇಶಕ, ರಂಗಭೂಮಿ ಕಲಾವಿದ ವಿಜಯ ಕುಮಾರ್ ಕೊಡಿಯಾಲಬೈಲ್ ಮಾತನಾಡಿ, ನಿರ್ಮಾಪಕ ರಾಜೇಶ್ ಬ್ರಹ್ಮಾವರ ಅವರು ಈ ಚಿತ್ರದ ಮೂಲಕ ತುಳು ಚಿತ್ರರಂಗದ ಮಾರುಕಟ್ಟೆಯನ್ನು ವಿಸ್ತರಿಸಿ ಹೊಸ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. “ಕಟಪಾಡಿ ಕಟ್ಟಪ್ಪ’ ಚಿತ್ರ ಉತ್ತಮವಾಗಿ ಮೂಡಿಬಂದಿದ್ದು ವೀಕ್ಷಕರ ಮನ ಗೆಲ್ಲುತ್ತದೆ ಎಂದರು.
ಚಿತ್ರದ ನಿರ್ದೇಶಕ ಜೆ.ಪಿ. ತೂಮಿನಾಡು, ಯಜ್ಞೆàಶ್ವರ ಬರ್ಕೆ, ಉದಯ ಪೂಜಾರಿ, ಚರಿಷ್ಮಾ ಸಾಲಿಯಾನ್ ಉಪಸ್ಥಿತರಿದ್ದರು.