ಮುಂಬಯಿ: ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಇದರ ಜೀರ್ಣೋದ್ಧಾರ ಮುಂಬಯಿ ಸಮಿತಿಯ ವತಿಯಿಂದ ಮುಂಬಯಿ ಭಕ್ತಾದಿಗಳಿಗೋಸ್ಕರ ಸಾರ್ವಜನಿಕ ಸಭೆಯು ಮಾ. 24 ರಂದು ಅಪರಾಹ್ನ 4 ರಿಂದ ಕುರ್ಲಾ ಪೂರ್ವದ ಬಂಟರ ಭವನದ ಮಿನಿ ಸಭಾಗೃಹದಲ್ಲಿ ಜರಗಲಿದೆ.
ಭಕ್ತಾದಿಗಳಿಗೆ ತಿಳಿರುವಂತೆ ಸಾಂಸ್ಕೃತಿಕ, ಧಾರ್ಮಿಕ, ಚಾರಿತ್ರಿಕ ಮಹತ್ವಗಳೊಂದಿಗೆ ದಟ್ಟವಾದ ಜಾನಪದ ಹಿನ್ನೆಲೆ ಇರುವ ಹಿರಿಯಡ್ಕ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ಮಹತೋಭಾರ ಹೆಸರಿನ ವಿಜೃಂಭಣೆಯಾಗಿ, ಸಾಂಸ್ಕೃತಿಕ ಪುನಾರಚನೆಯಾಗಿ ನಡೆದಿದೆ.
ಸುಮಾರು 25 ಕೋ. ರೂ. ಗಳ ವೆಚ್ಚದಲ್ಲಿ ಪುನಃರ್ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದ್ದು ಎ. 16 ರಿಂದ ಎ. 25 ರವರೆಗೆ ಶ್ರೀ ದೇವರ ಪುರ್ನ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನಿರ್ಮಾಣ ಕಾರ್ಯದ ವೆಚ್ಚ ಏರಿಕೆಯಾಗಿದ್ದು ದಾನಿಗಳಿಂದ ಹೆಚ್ಚಿನ ಉದಾರ ದೇಣಿಗೆಯನ್ನು ಸಮಿತಿಯು ನಿರೀಕ್ಷಿಸುತ್ತಿದೆ. ಇನ್ನೂ ದೇಣಿಗೆ ನೀಡಲು ಬಾಕಿ ಇರುವವರು ದಯವಿಟ್ಟು ಆದಷ್ಟು ಶೀಘ್ರವಾಗಿ ತಮ್ಮ ಉದಾರ ದೇಣಿಗೆ ನೀಡಿ ಸಹಕರಿಸುವಂತೆ ವಿನಂತಿಸಲಾಗಿದೆ.
ಸಭೆಯಲ್ಲಿ ನಗರದ ಭಕ್ತಾದಿಗಳು, ದಾನಿಗಳು, ಭಾಗವಹಿಸಿ ಸಹಕರಿಸುವಂತೆ ಜೀರ್ಣೋ¨ªಾರ ಸಮಿತಿ ಮುಂಬಯಿ ಇದರ ಗೌವಾಧ್ಯಕ್ಷ ಸಿಎ ಎನ್. ಬಿ. ಶೆಟ್ಟಿ, ಕಾರ್ಯಾಧ್ಯಕ್ಷ ಅರುಣಾಚಲ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್‌ದಾಸ್ ಶೆಟ್ಟಿ, ಕೋಶಾಧಿಕಾರಿ ವಿಜಯ ಆರ್. ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.