Advertisement
ಈ ಕುರಿತಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದ್ದು, ಗರ್ಭಗುಡಿಯ ಬಾಗಿಲುಗಳಿಗೆ ಚಿನ್ನ ಲೇಪಿಸಲಾಗುತ್ತಿದೆ. ಜೈ ಶ್ರೀರಾಮ್ ಘೋಷಣೆ ಮೂಲಕ ಬಾಗಿಲುಗಳನ್ನು ಎತ್ತಿ ನಿಲ್ಲಿಸಿ ಕಾರ್ಯಾರಂಭ ಮಾಡಲಾಗಿದೆ. ಈ ತಿಂಗಳಲ್ಲೇ ಲೇಪನ ಪೂರ್ಣಗೊಳ್ಳಲಿದೆ. ಪ್ರತೀ ಅಂತಸ್ತಿನಲ್ಲಿ 18 ಬಾಗಿಲುಗಳು ಇರಲಿದ್ದು, ಗರ್ಭಗುಡಿಯ ಬಾಗಿಲುಗಳು ಅತೀ ದೊಡ್ಡದಾಗಿವೆ. ರಾಮಲಲ್ಲಾನ ವಿಗ್ರಹವನ್ನು ಕೂರಿಸುವು ದಕ್ಕಾಗಿ ರಾಜಸ್ಥಾನದಲ್ಲಿ 8 ಅಡಿ ಎತ್ತರದ ಅಮೃತಶಿಲೆಯ ಸಿಂಹಾಸನವನ್ನು ಕೆತ್ತಲಾಗಿದೆ. ಅದಕ್ಕೂ ಚಿನ್ನ ಲೇಪಿಸಲಾಗುವುದು ಮತ್ತು ಸಿಂಹಾಸನ ಡಿ.15ರಂದು ಅಯೋಧ್ಯೆ ತಲುಪಲಿದೆ ಎಂದು ಟ್ರಸ್ಟ್ ಹೇಳಿದೆ.
ಅಯೋಧ್ಯೆಯಲ್ಲಿ ಗುರುವಾರದಿಂದಲೇ ದೀಪೋ ತ್ಸವ ಆರಂಭವಾಗಿದ್ದು, ಈ ಬಾರಿ 51 ಘಾಟ್‌ಗಳಲ್ಲಿ 24 ಲಕ್ಷ ದೀಪಗಳನ್ನು ಬೆಳಗಿಸಲು ಉದ್ದೇಶಿಸ ಲಾಗಿದೆ. ಇದರೊಂದಿಗೆ ವರ್ಚುವಲ್ ದೀಪೋತ್ಸವ ಕ್ಕೂ ಅನುವು ಮಾಡಿಕೊಡಲಾಗಿದ್ದು, ಬೇರೆಡೆ ಇರುವ ರಾಮಭಕ್ತರು ವರ್ಚುವಲ್ ಆಗಿಯೇ ಅಯೋಧ್ಯೆಯ ಘಾಟ್‌ಗಳಲ್ಲಿ ದೀಪ ಬೆಳಗಿಸ ಬಹುದು. https://holyayodhya.com/ ಈ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ನಮಗೆ ಬೇಕಾದ ಘಾಟ್ ಆಯ್ಕೆ ಮಾಡಿ ಬೇಕಾದ ಸ್ಥಳದಲ್ಲಿ ದೀಪ ಬೆಳಗಿಸಬಹುದು. ಅದಕ್ಕಾಗಿ ಒಂದು ದೀಪಕ್ಕೆ 51 ರೂ., 11 ದೀಪಗಳಿಗೆ 101 ರೂ, 51 ದೀಪಗಳಿಗೆ 1,100ರೂ. ನಿಗದಿಪಡಿಸಲಾಗಿದೆ.