Advertisement
ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿಸರಾಗ ಸಂಚಾರ ಕಷ್ಟಕರವಾದ ರಸ್ತೆ ಯಲ್ಲಿ ಅಚಾನಕ್ ತಿರುವುಗಳು, ಉಬ್ಬು ತಗ್ಗು ಗಳು ಇರುವ ಕಾರಣ ವಾಹನದಲ್ಲಿ ಕುಲುಕಾಟ ಸಾಮಾನ್ಯ. ಒಂದೊಮ್ಮೆ ಎದುರಿನಿಂದ ಬರುವ ಅಪಾಯ ತಪ್ಪಿಸಲು ಟಿಪ್ಪರ್ ಚಾಲಕ ಬ್ರೇಕ್ ಅದುಮಿದರೆ ವಾಹನದಲ್ಲಿ ಹೋಗುವವರು, ಅದರಲ್ಲೂ ಬೈಕ್ ಸವಾರರು ದೇವರಿಗೆ “ಪ್ರಾರ್ಥನೆ’ ಸಲ್ಲಿಸುವುದಷ್ಟೇ ಬಾಕಿ. ಈ ರೀತಿ ಕಲ್ಲುಗಳನ್ನು ಕೊಂಡೊಯ್ಯುವವರ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಸುರಕ್ಷಾ ಕ್ರಮಗಳನ್ನು ಅಳವಡಿಸಿಯೇ ಕಲ್ಲುಗಳನ್ನು ಕೊಂಡೊಯ್ಯುವಂತೆ ಸೂಚಿಸುವ ಅಗತ್ಯವಿದೆ.
ಕಲ್ಲು ಹೇರಿದ ಲಾರಿಗಳ ಹಿಂದೆ ಚಲಿಸುವುದು, ವಾಹನ ಸವಾರರ ಪಾಲಿಗೆ ಯಮದೂತನಂತೆ ಭಾಸವಾಗುತ್ತಿದೆ. ನಂಬರ್ ಪ್ಲೇಟ್‌ನಲ್ಲಿ ನೋಂದಣಿ ಸಂಖ್ಯೆ ಸರಿ ಕಾಣದ, ಬ್ರೇಕ್ ಲೈಟ್ ಇಲ್ಲದ, ಕಲ್ಲು ಲಾರಿಯಿಂದ ರಸ್ತೆಗೆ ಬೀಳದಂತೆ ಯಾವುದೇ ಸುರಕ್ಷೆ ಅಳವಡಿಸದ ವಾಹನ ಚಲಿಸುವಾಗ ಹಿಂಬದಿ ವಾಹನ ಸವಾರರು ಅಪಾಯ ತಪ್ಪಿಸಿಕೊಂಡರೆ ಸಾಕು ಎಂದುಕೊಳ್ಳುತ್ತಾರೆ. ಕಲ್ಲುಗಳು ಉರುಳದಂತೆ ಲಾರಿಯಲ್ಲಿ ತಡೆಯಿಲ್ಲದಿರುವುದು ಅಪಾಯವಾಗಿದೆ. ಜತೆಗೆ ಟಿಪ್ಪರ್‌ಗಳ ಚಾಲಕರೂ ತೀರಾ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದಾರೆ. ಹೆದ್ದಾರಿಯೂ ದುರಸ್ತಿಯಾಗುತ್ತಿರುವುದರಿಂದ ಅಲ್ಲಲ್ಲಿ ಅನೇಕ ಅಡೆತಡೆಗಳನ್ನು ಹೊಂದಿದೆ.