Advertisement
ಸುಳ್ಯ ಮರಾಟಿ ಸಮಾಜ ಸೇವಾ ಸಂಘದ 25ನೇ ವರ್ಷಾಚರಣೆ ಪ್ರಯುಕ್ತ ರವಿವಾರ ನಗರದ ಅಂಬೆಟೆಡ್ಕ ಮರಾಟಿ ಸಮಾಜ ಸೇವಾ ಮಂದಿರದಲ್ಲಿ ನಡೆದ ಬೆಳ್ಳಿ ಹಬ್ಬ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿಯಲ್ಲಿ ಸಂಸ್ಕೃತಿ, ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜಾತಿಯೊಳಗೆ ಕಳೆದು ಹೋಗದೆ, ಇಡೀ ಸಮಾಜ ಗುರುತಿಸುವಂತಹ ಕೆಲಸ ಮಾಡಬೇಕು. ಆ ಮೂಲಕ ವ್ಯಕ್ತಿಗತವಾಗಿಯೂ ಗಟ್ಟಿಗೊಳ್ಳಬೇಕು ಎಂದು ನುಡಿದರು.
ಗಳನ್ನು ರೂಢಿಸಿಕೊಂಡು ಪರೋಪಕಾರಿಯಾಗಿ ಬಾಳಬೇಕು. ಸ್ವಾವಲಂಬಿ, ಸ್ವಾಭಿಮಾನಿಗಳಾಗಿ ಜೀವನ ಸಾಗಿಸಬೇಕು ಎಂದರು. ಕರ್ನಾಟಕ ಮರಾಟಿ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಮತಿ ಟಿ. ಮಾತನಾಡಿ, ಹಿಂದುಳಿದ ಸಮಾಜ ಬಲಿಷ್ಠ
ಗೊಳ್ಳಲು ನಾವು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು. ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಜಿ. ದೇವಪ್ಪ ನಾಯ್ಕ ಮಾತನಾಡಿ, ಸಂಘಟನೆಯ ಮೇಲೆ ಅನುಮಾನ ಪ್ರವೃತ್ತಿ ಬೇಡ. ಅಭಿಮಾನ ಹೊಂದಿ ಎಂದರು.
Related Articles
Advertisement
ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಯು.ಕೆ. ನಾಯ್ಕ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಮರಾಟಿ ಸಮಾಜ ಎಲ್ಲ ರಂಗಗಳಲ್ಲಿ ಸಾಧನೆ ತೋರಬೇಕು. ಪ್ರತಿ ಮನೆಯಲ್ಲಿ ಹೆತ್ತವರು ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು. ನಮ್ಮ ಸಮಾಜ, ನಮ್ಮ ಸಂಘ ಎಂಬ ಭಾವನೆ ಎಲ್ಲರಲ್ಲೂ ಇರಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಮರಾಟಿ ಸಮಾಜ ಸೇವಾ ಸಂಘದ ಬೆಳ್ಳಿಹಬ್ಬ ಆಚರಣ ಸಮಿತಿ ಅಧ್ಯಕ್ಷ ಎ.ಕೆ. ನಾಯ್ಕ ಮಾತನಾಡಿ, ಸುಂದರ ಕಾರ್ಯಕ್ರಮ ಹಮ್ಮಿಕೊಳ್ಳಲು ಎಲ್ಲ ಹಂತದಲ್ಲಿಯೂ ಬೆಂಬಲ ನೀಡಿದವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಸಂಘಕ್ಕೆ ಸಹಕಾರ ನೀಡಿದ ಶಾಸಕ ಎಸ್. ಅಂಗಾರ, ರಾಜ್ಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ|ಕೆ. ಸುಂದರ ನಾಯ್ಕ, ಸ್ವಾವಲಂಬಿ ಬದುಕು ಸಾಗಿಸಿದ ಐತ್ತಪ್ಪ ನಾಯ್ಕ ಕಜೆ, ಚೊಕ್ಕಾಡಿ ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ನ.ಪಂ. ಸದಸ್ಯೆ ಮೀನಾಕ್ಷಿ ಭಸ್ಮಡ್ಕ, ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸೀತಾನಂದ
ಬೇರ್ಪಡ್ಕ, ಬೆಳ್ಳಿಹಬ್ಬ ಆಚರಇ ಸಮಿತಿ ಕಾರ್ಯಾಧ್ಯಕ್ಷ ದಾಮೋದರ ಮಂಚಿ, ಮಹಿಳಾ ವೇದಿಕೆ ಉಪಾಧ್ಯಕ್ಷೆ ಕುಸುಮಾ ಜನಾರ್ದನ, ಮರಾಟಿ ಸಂಘದ ಪೆರುವಾಜೆ ಗ್ರಾಮ ಸಮಿತಿ ಅಧ್ಯಕ್ಷ ಕೃಷ್ಣಪ್ಪ ನಾಯ್ಕ ದೇವುಮೂಲೆ, ಬಾಳಿಲ ಗ್ರಾಮ ಸಮಿತಿ ಅಧ್ಯಕ್ಷ ಬಾಲಕೃಷ್ಣ ಚಾಕೋಟೆತಡ್ಕ, ಉಬರಡ್ಕ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ ಉಪಸ್ಥಿತರಿದ್ದರು. ರಾಜ್ಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕೆ. ಸುಂದರ ನಾಯ್ಕ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮರಾಟಿ ಸಮಾಜ ಸೇವಾ ಸಂಘ ಯುವ ವೇದಿಕೆ ಅಧ್ಯಕ್ಷ ಭವಾನಿಶಂಕರ ಕಲ್ಮಡ್ಕ ವಂದಿಸಿದರು. ಕೃಷ್ಣರಾಜ್ ಕೇರ್ಪಳ, ದಯಾನಂದ ಪತ್ತುಕುಂಜ, ಈಶ್ವರ್ ವಾರಣಾಸಿ ನಿರೂಪಿಸಿದರು. ವಿಚಾರಗೋಷ್ಠಿ
ಸಭಾ ಕಾರ್ಯಕ್ರಮದ ಅನಂತರ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ರಂಗಗಳಲ್ಲಿ ಮರಾಟಿ ಜನಾಂಗದವರ ಪಾತ್ರ ಕುರಿತು ಕೃಷಿ ಇಲಾಖೆಯ ನಿವೃತ್ತ ನಿರ್ದೇಶಕ ಡಾ| ಬಿ.ಜಿ ನಾಯ್ಕ, ಶ್ರೀ ಮಹಮ್ಮಾಯಿ ಗೋಂದೋಳು ಪೂಜೆ ಆಚರಣೆ ಕುರಿತು ಕಾಸರಗೋಡು ಮರಾಟಿ ಯೂತ್ ಜನರೇಶನ್ ಕ್ಲಬ್ ಸ್ಥಾಪಕಾಧ್ಯಕ್ಷ ಟಿ.ಸುಬ್ರಾಯ ನಾಯ್ಕ ಅವರು ವಿಚಾರ ಮಂಡಿಸಿದರು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.