Advertisement
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಿ| ಸಾಣೆ ಗುರೂಜಿ ಅಂತರ್ ಭಾರತೀಯ ಸ್ವಪ್ನ ಕಂಡವರು. ಅದನ್ನು ಪ್ರತ್ಯಕ್ಷವಾಗಿ ಕೃತಿಯಲ್ಲಿ ರೂಪಿಸಿದ ಶ್ರೇಯ ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರಕ್ಕೆ ಸಲ್ಲುತ್ತದೆ. ಕಳೆದ 24 ವರ್ಷಗಳಿಂದ ಪುಣೆಯಲ್ಲಿ ಕನ್ನಡೇತರರಿಗೆ, ವಿಶೇಷವಾಗಿ ಮರಾಠಿಗರಿಗೆ ಕನ್ನಡ ಕಲಿಕಾ ವರ್ಗ ನಡೆಸುತ್ತ ಎರಡೂ ಭಾಷಿಕರಲ್ಲಿ ಅನುಬಂಧವನ್ನು ನೇರವಾಗಿ ಬಿಂಬಿಸುತ್ತಿರುವ ಈ ಉಪಕ್ರಮ ಅನನ್ಯವೂ, ಅನುಪಮವೂ ಆಗಿದೆ ಎಂದರು.
Related Articles
Advertisement
2016ರ ಮಾರ್ಚ್‌ನಲ್ಲಿ ಆಯೋಜಿಸಲಾದ ಕನ್ನಡ ಕಲಿಕಾ ವರ್ಗ ಮತ್ತು ಪ್ರಗತ ಕನ್ನಡ ಕಲಿಕಾ ವರ್ಗಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಅಧ್ಯಕ್ಷ ಯಮಾಜಿ ಮಾಲಕರ್ ಮತ್ತು ಮುಖ್ಯ ಅತಿಥಿ ಪ್ರೊ| ಗುರುರಾಜ ಸಿ. ಕುಲಕರ್ಣಿ ಅವರ ಹಸ್ತದಿಂದ ಪ್ರಮಾಣಪತ್ರ ಪ್ರದಾನಿಸಲಾಯಿತು.
ವರ್ಗದ ಶಿಕ್ಷಕ ವಿಶ್ವನಾಥ ಶೆಟ್ಟಿ ಅವರು ಎರಡೂ ವರ್ಗಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳು ಶುದ್ಧ ಕನ್ನಡದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.
ಕೇಂದ್ರದ ಪ್ರಧಾನ ಕಾರ್ಯದರ್ಶಿ, ಕನ್ನಡ ಕಲಿಕಾ ವರ್ಗದ ಸಂಚಾಲಕ ಕೃ. ಶಿ. ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಕೇಂದ್ರದ ವಿಶ್ವಸ್ತ ಡಾ| ರಾಘವೇಂದ್ರ ಕಟ್ಟಿ ಮುಖ್ಯ ಅತಿಥಿಯ ಪರಿಚಯ ಮಾಡಿದರು. ಲತಾ ಹಿರೇಮs… ಕಾರ್ಯಕ್ರಮದ ಅಧ್ಯಕ್ಷರ ಪರಿಚಯ ಮಾಡಿದರು. ಅದೇ, ಕನ್ನಡ ಕಲಿಕಾ ವರ್ಗದ ವಿದ್ಯಾರ್ಥಿ ಅರುಣಾ ಸಿ. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ವಿಶ್ವಸ್ತ ಸಿ. ಎಂ. ಹರ್ಕುಡೆ ವಂದಿಸಿದರು.