Advertisement

ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರ ಕನ್ನಡ ಕಲಿಕಾ ವರ್ಗದ ರಜತೋತ್ಸವ

01:26 PM Aug 23, 2018 | |

ಪುಣೆ: ಪುಣೆಯಲ್ಲಿ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರ ಅಂತರ್‌ ಭಾರತಿ ಕಲ್ಪನೆಯೊಂದಿಗೆ ವೈಶಿಷ್ಟ éಪೂರ್ಣವಾಗಿ ಕನ್ನಡ ಕಲಿಕಾ ವರ್ಗವನ್ನು ನಡೆಸುತ್ತಾ ರಜತಮಹೋತ್ಸವ ಆಚರಿಸುತ್ತಿರುವುದು ಅಭಿನಂದನೀಯ. ಇದೊಂದು ರಾಷ್ಟ್ರೀಯ ಭಾವೈಕ್ಯ ಸಂಸ್ಥೆಯ ದೊಡ್ಡ ಕೊಡುಗೆಯಾಗಿದೆ. ಭಾಷಾ ಕಲಿಕೆಯೊಂದಿಗೆ ಸಾಹಿತ್ಯವನ್ನೂ ಬೆಳೆಸುವ ಸಂಸ್ಥೆಯ ಕಾರ್ಯ ಗುರುತರವಾಗಿದೆ.  ಒಂದು ಸಾಹಿತ್ಯ ದೇಶ ಹಾಗೂ ಕಾಲಕ್ಕನುಗುಣವಾಗಿ ರಚನೆಯಾಗಬೇಕಾಗಿದೆ. ದೇಶ ಹಾಗೂ ಕಾಲಗಳ ಇತಿಮಿತಿಯನ್ನು ಮೀರಿ ಸರ್ವಕಾಲಕ್ಕೆ ಪೂರಕವಾಗುವಂತೆ ಸಾಹಿತ್ಯ ಸೃಷ್ಟಿಯಾಗಬೇಕು. ಸಾಹಿತ್ಯ ಒಂದು ನಾಡಿನ ಪ್ರತೀಕವಾಗಿ ಹುಟ್ಟಬೇಕಾಗಿದೆ. ಅದರಲ್ಲಿ ಅನಂತ ಸಾಹಿತ್ಯದ ಅನೇಕ ಗುಣಗಳಿರಬೇಕು. ಸಾಹಿತ್ಯ  ಜಗತ್ತಿನ ಪರಿಸ್ಥಿತಿಯ ಸಂವೇದನೆಗೆ ಸಿಕ್ಕಿದಾಗ ಮಿಥ್ಯತೆಯ ಹಾದಿಯನ್ನು ತೋರಿಸುತ್ತದೆ. ಈ ರೀತಿ ಮಾಡುವವನೇ ನಿಜವಾದ ಸಾಹಿತಿ ಎಂದು  ಸಾಮಾಜಿಕ ಕಾರ್ಯಕರ್ತ ಹಾಗೂ ಜ್ಯೇಷ್ಠ ಕನ್ನಡ ಹಾಗೂ ಇಂಗ್ಲಿಷ್‌ ಸಾಹಿತಿ ಕೃಷ್ಣ ವಿ. ಇತ್ನಾಳ್‌ ಅವರು ಅಭಿಪ್ರಾಯಪಟ್ಟರು.

Advertisement

ಆ. 17 ರಂದು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ ಜರಗಿದ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರದ ಕನ್ನಡ ಕಲಿಕಾ ವರ್ಗದ ರಜತ ಮಹೋತ್ಸವ ಹಾಗೂ ಪಾಂಗಾಳ ವಿಶ್ವನಾಥ ಶೆಟ್ಟಿಯವರ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ  ಮರಾಠಿ ಸಾಹಿತಿ ಹಾಗೂ ಸಂತ ಸಾಹಿತ್ಯ ಅಭ್ಯಾಸಕ ಡಾ| ಅಶೋಕ್‌ ಕಾಮತ್‌  ಮಾತನಾಡಿ,  ಭಾಷೆ ಎಂಬುದು ಅಭಿವ್ಯಕ್ತಿಯ ಮಾಧ್ಯಮವಾಗಿದೆ. ಭಾಷೆ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಭಾರತದಂತಹ ದೇಶದಲ್ಲಿ ಮಾತೃಭಾಷೆಯೊಂದಿಗೆ ಅನ್ಯ ಭಾಷೆಯನ್ನೂ ಕಲಿಯುವುದು ಔಚಿತ್ಯಪೂರ್ಣವಾಗಿದೆ. ರಾಷ್ಟ್ರಭಾಷೆ, ಮಾತೃಭಾಷೆಯೊಂದಿಗೆ ಇತರ ಭಾಷೆಗಳನ್ನೂ ಕಲಿಯುವುದು ಇಂದಿನ ಅಗತ್ಯವಾಗಿದೆ. ಮಹಾರಾಷ್ಟ್ರದ ವಿದ್ಯಾಪೀಠಗಳಲ್ಲಿ  ಹೊರ ರಾಜ್ಯದ ಭಾಷೆಗಳನ್ನು ಕಲಿಸುವ ವಿಭಾಗ ಆರಂಭಿಸುವ ಅಗತ್ಯತೆಯಿದೆ. ಕರ್ನಾಟಕದಲ್ಲಿ ಈಗಾಗಲೇ ಇಂತಹ ಅವಕಾಶಗಳು ಇವೆ.  ಈ ನಿಟ್ಟಿನಲ್ಲಿ ಅಂತರ ಭಾರತಿ ವ್ಯವಸ್ಥೆಯಡಿಯಲ್ಲಿ ತೊಡಗಿಸಿಕೊಂಡು ಭಾಷೆ ಹಾಗೂ ಸಂಸ್ಕೃತಿಯನ್ನು ಬೆಳೆಸುವ ಕೃ. ಶಿ. ಹೆಗಡೆಯವರ ಕಾರ್ಯ ಸ್ತುತ್ಯರ್ಹವಾಗಿದೆ. ಇಂತಹ ಕಾರ್ಯವು ಐತಿಹಾಸಿಕ ದಾಖಲೆಯಾಗಿದ್ದು ಸರಕಾರದ ವತಿಯಿಂದ ಈ ಸಂಸ್ಥೆಗೆ ಸ್ಥಳಾವಕಾಶ ನೀಡಬೇಕಾಗಿದೆ ಎಂದರು. ವೇದಿಕೆಯಲ್ಲಿ ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌, ಕವಿ ಪಾಂಗಾಳ ವಿಶ್ವನಾಥ ಶೆಟ್ಟಿ, ಕವಿ ಪೊಳಲಿ ಮಹೇಶ್‌ ಹೆಗ್ಡೆ, ಕೇಂದ್ರದ ವಿಶ್ವಸ್ಥರಾದ ಚಂದ್ರಕಾಂತ ಹಾರಕೂಡೆ ಹಾಗೂ ಹೆರ್ಲೆಕರ್‌ ಉಪಸ್ಥಿತರಿದ್ದರು. ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅತಿಥಿ-ಗಣ್ಯರನ್ನು ಸತ್ಕರಿಸಲಾಯಿತು. ಈ ಸಂದರ್ಭ ಕವಿ, ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿಯವರು ಬರೆದ  ಸಂತ ಸಾಮ್ರಾಟ ಜ್ಞಾನೇಶ್ವರ ಮಹಾರಾಜರ ಜೀವನ ಚರಿತ್ರೆ ಬೆಂಕಿಯಲ್ಲಿ ಬೆಂದ ಬಂಗಾರ ಹಾಗೂ ಒಣಮರ ಚಿಗುರಿದಾಗ ಕಥಾ ಸಂಕಲನಗಳನ್ನು ಅತಿಥಿಗಳ ಹಸ್ತದಿಂದ  ಬಿಡುಗಡೆಗೊಳಿಸಲಾಯಿತು.

ಬೆಂಕಿಯಲ್ಲಿ ಬೆಂದ ಬಂಗಾರ ಪುಸ್ತಕದ ಪರಿಚಯವನ್ನು  ಇಂದಿರಾ ಸಾಲ್ಯಾನ್‌ ಮಾಡಿ,  ಮೃದು ಭಾಷೆ ಹಾಗೂ ಮೃದು ಹೃದಯದ ಕವಿ ಮನಸ್ಸಿನ ಪಾಂಗಾಳ ವಿಶ್ವನಾಥ ಶೆಟ್ಟಿಯವರು ಸಣ್ಣ ಪ್ರಾಯದÇÉೇ ದೊಡ್ಡ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಶ್ರೇಷ್ಠತೆಯನ್ನುಗಳಿಸಿ ದೈವತ್ವಕ್ಕೇರಿದ  ಮಹಾರಾಷ್ಟ್ರದ ಸಂತ ಶ್ರೇಷ್ಠರಾದ ಜ್ಞಾನೇಶ್ವರ ಮಹಾರಾಜರ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಬರೆದು ಕನ್ನಡಿಗರಿಗೆ ದೊಡ್ಡ ಕೊಡುಗೆಯನ್ನು ನೀಡಿ¨ªಾರೆ. ನಮ್ಮ ಮಕ್ಕಳಿಗೆ ಇಂತಹ ಆಧ್ಯಾತ್ಮಿಕ ಚಿಂತನೆಗಳನ್ನು ಕಲಿಸುವ ಅಗತ್ಯತೆಯಿದೆ. ವಿದ್ಯೆಯೊಂದಿಗೆ ಆಧ್ಯಾತ್ಮಿಕ ವಿಚಾರಗಳನ್ನು ಕಲಿಸಿದಾಗ ಮಕ್ಕಳು ಸಂಸ್ಕಾರವಂತರಾಗಿ ಜೀವನ ಮಾಡಲು ಸಾಧ್ಯವಾಗುತ್ತದೆ. ಸಾಹಿತ್ಯಕ್ಕೆ ಪ್ರೇರಣೆ ನೀಡುವ ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ಕನ್ನಡ ಮರಾಠಿ ಭಾಷಾ ಸಂವರ್ಧನೆಯ ಬೆಸುಗೆ ನಿರಾತಂಕವಾಗಿ ಸಾಗಲಿ ಎಂದರು.

ಕವಿ ಪೊಳಲಿ ಮಹೇಶ್‌ ಹೆಗ್ಡೆಯವರು ಒಣಮರ ಹೀಗುರಿದಾಗ ಕಥಾ ಸಂಕಲನದ ಬಗ್ಗೆ ಮಾತನಾಡಿ,  ಪಾಂಗಾಳ ವಿಶ್ವನಾಥ ಶೆಟ್ಟಿಯವರು ಕಥೆ, ಕವಿತೆ, ಸಾಹಿತ್ಯಗಳನ್ನು  ರಚಿಸಿ ಕನ್ನಡ  ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಸಾಧಕರಾಗಿ¨ªಾರೆ. ಕಥೆಗಾರನ ತಿಳಿವಿಗೆ ಬಾರದಂತೆ ಅವರ ಮನದಾಳದಲ್ಲಿ ಮನೆಮಾಡಿರುವ ದು:ಖ ದುಮ್ಮಾನ, ಸಮಾಜದ ಕುಂದುಕೊರತೆಗಳು ಹೊರಹೊಮ್ಮುವ ತವಕದಲಿ ಕತೆ ಹುಟ್ಟಿಕೊಳ್ಳುತ್ತದೆ. ರಸ, ವಿರಸ, ಪ್ರೀತಿ, ಪ್ರೇಮ ಹುಟ್ಟು, ಸಾವು ಇರುವಲ್ಲಿ ಕಥೆ ಜನ್ಮತಾಳುತ್ತದೆ. ಬಾಳಿನ ಅತೀ ಚಿಕ್ಕ ವಿಚಾರ, ದಿನನಿತ್ಯದ ವೈವಿಧ್ಯಪೂರ್ಣ ಅನುಭವಗಳನ್ನು ಸಹೃದಯ ವಿಶ್ವಕ್ಕೆ ನಿಲುಕುವಂತೆ ಮಾಡುತ್ತದೆ. ಈ ಕಥಾ ಸಂಕಲನದಲ್ಲಿನ ಎÇÉಾ ಕಥೆಗಳೂ  ಕಥಾ ಪ್ರೇಮಿಗಳ ಮನವನ್ನು ಸುಲಭವಾಗಿ ತಟ್ಟುವಲ್ಲಿ ಯಶಸ್ವಿಯಾಗಿದೆ. ಅವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಹೊರ ಬರುವಂತಾಗಲಿ. ಕೇಂದ್ರದ ಭಾಷಾ ಬಾಂಧವ್ಯವನ್ನು ಬೆಸೆಯುವ ಕಾಯಕದೊಂದಿಗೆ ಸಾಹಿತ್ಯದ ಚಟುವಟಿಕೆಗಳೂ ನಡೆಯುತ್ತಿರಲಿ ಎಂದರು.

Advertisement

ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೃ. ಶಿ. ಹೆಗಡೆ ಪ್ರಾಸ್ತಾವಿಕವಾಗಿ  ಮಾತನಾಡಿ, ಮರಾಠಿ ಕನ್ನಡ ಅನುಬಂಧ ಸುಮಾರು 700 ವರುಷಗಳಿಂದ ನಡೆದುಕೊಂಡಿದೆ. ಸಾನೇ ಗುರೂಜಿಯವರ  ಅಂತರ್‌ ಭಾರತಿ ಕಲ್ಪನೆಯೊಂದಿಗೆ  ಸ್ಥಾಪಿತಗೊಂಡ ಈ ಸಂಸ್ಥೆಯ ಕನ್ನಡ ಕಲಿಕಾ ವರ್ಗಕ್ಕೆ 25 ವರುಷಗಳು ತುಂಬಿದೆ. ಮರಾಠಿ-ಕನ್ನಡ ಅನುಬಂಧ, ಸಾಹಿತ್ಯ, ಭಾಷೆ, ಸಂಗೀತ, ಕಲೆಯನ್ನು ಪೋಷಿಸುವಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಇದುವರೆಗೆ ನಮ್ಮ ಕೇಂದ್ರದಿಂದ 300 ಕೃತಿಗಳನ್ನು ಅನುವಾದಿಸಲಾಗಿದೆ. 70 ಗ್ರಥಗಳನ್ನು ಪ್ರಕಾಶನಗೊಳಿಸಲಾಗಿದೆ.  ಇಂದು ಪಾಂಗಾಳ ವಿಶ್ವನಾಥ ಶೆಟ್ಟಿ ಅವರ ಎರಡು ಗ್ರಂಥಗಳನ್ನು ಪ್ರಕಾಶನಗೊಳಿಸಲು ಆನಂದವಾಗುತ್ತಿದೆ. ಮರಾಠಿ ಮತ್ತು ಕನ್ನಡ ಎರಡೂ ಭಾಷೆಗಳನ್ನು  ಜೋಡಿಸುವ ಕೆಲಸವನ್ನು ಮಾಡುತ್ತಿರುವ ಸಂಸ್ಥೆಗೆ ಒಂದು ಶಾಶ್ವತ ಕಚೇರಿ ಹೊಂದುವ ಅಗತ್ಯತೆಯಿದ್ದು ಸಹೃದಯರು ಸಹಕಾರ ನೀಡಬೇಕಾಗಿದೆ ಎಂದು ನುಡಿದರು.

ಕನ್ನಡ ಕಲಿಕಾ ವರ್ಗದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕೇಂದ್ರದ ವಿಶ್ವಸ್ತರಾದ ಅರವಿಂದ ಹೆರ್ಲೆಕರ್‌, ಚಂದ್ರಕಾಂತ ಹಾರಕೂಡೆ ಅತಿಥಿಗಳನ್ನು ಪರಿಚಯಿಸಿದರು. ಮೊದಲಿಗೆ ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿಯವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಾಂಗಾಳ ವಿಶ್ವನಾಥ ಶೆಟ್ಟಿ ಅವರು ವಂದಿಸಿದರು. 

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next