Advertisement

Santosh Lad: ಮರಾಠ ದೊರೆ ‘ಕೈ’ಗೆ ಏಳು ಸುತ್ತಿನ ಕೋಟೆ

06:43 PM May 27, 2023 | Team Udayavani |

ಧಾರವಾಡ: ಗಣಿನಾಡು ಬಳ್ಳಾರಿ ಮೂಲದ ಸಂತೋಷ ಲಾಡ್ ಅವರು 2008ರ ಕ್ಷೇತ್ರ ಪುನರ್‌ವಿಂಗಡನೆ ನಂತರ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರಕ್ಕೆ ಕಾಲಿಟ್ಟು ಗೆದ್ದು ಸಚಿವರಾದವರು. ಬಸವ ತತ್ವ ಪ್ರಿಯರು ಕೂಡ ಆಗಿರುವ ಲಾಡ್, ಇದೀಗ ಮರಾಠಾ ಕೋಟಾದಡಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.

Advertisement

2004ರಲ್ಲಿ ಬಳ್ಳಾರಿ ಜಿಲ್ಲೆ ಸಂಡೂರಿನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು 2008, 2013 ರಲ್ಲಿ ಕಲಘಟಗಿ ಕ್ಷೇತ್ರದಲ್ಲಿ ಜಯಗಳಿಸಿದರು. ಆದರೆ 2018 ರಲ್ಲಿ ಸೋಲುಂಡ ಲಾಡ್, ಇದೀಗ 2023ರ ಚುನಾವಣೆಯಲ್ಲಿ ಮತ್ತೆ ಗೆದ್ದು ಸಚಿವರಾಗಿದ್ದಾರೆ. ಗಣಿ ಉದ್ಯಮಿಯಾಗಿದ್ದರೂ ಸಜ್ಜನಿಕೆ ಮತ್ತು ಸರಳತೆ ಈ ಬಾರಿಯ ಅವರ ಗೆಲುವಿಗೆ ಪ್ರಮುಖ ಕಾರಣ.

ಸಂತೋಷ ಲಾಡ್ ಹೈ ಪ್ರೊಫೈಲ್ ವ್ಯಕ್ತಿಗಳ ಒಡನಾಟ ಹೊಂದಿದವರು. ಕ್ರಿಕೆಟಿಗ ಭಾರತ ತಂಡದ ಮಾಜಿ ನಾಯಕ ಅಜರುದ್ದೀನ್, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ನಟ ಜಾಕಿ ಶ್ರಾಫ್, ಶಕ್ತಿ ಕಪೂರ್ ಸೇರಿದಂತೆ ಬಾಲಿವುಡ್‌ ನ ನಟ ನಟಿಯರೊಂದಿಗೆ ಲಾಡ್ ಉತ್ತಮ ಸ್ನೇಹ ಹೊಂದಿದ್ದಾರೆ.

ಇದನ್ನೂ ಓದಿ:Kerala: ಸಾವಿರ ವರ್ಷದ ಪುರಾತನ ದೇವಾಲಯವನ್ನು ಭೂಮಿಯಿಂದ 6 ಅಡಿ ಎತ್ತರಕ್ಕೆ ಏರಿಸಿದ್ದೇಗೆ?

ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ, ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮಗಳನ್ನು ಸದಾ ಮಾಡುತ್ತಲೇ ಜನರ ಮನ ಗೆದ್ದ ಲಾಡ್, 2004 ರಿಂದ 2014ರವರೆಗೆ ಕಲಘಟಗಿ ಕ್ಷೇತ್ರದಲ್ಲಿ ಸಣ್ಣ ಮತ್ತು ಬಡ ವರ್ಗದ ರೈತರಿಗೆ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಟ್ಟು ಜನಪ್ರಿಯರಾಗಿದ್ದರು. 2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ವಿಸ್ತರಣೆಯಲ್ಲೇ ಕಾರ್ಮಿಕ ಸಚಿವರಾಗಿದ್ದ ಅವರು, ಅಂದು ಹಿಮಾಲಯದ ರಾಜ್ಯಗಳಲ್ಲಿ ಭಾರಿ ಜಲಪ್ರಳಯವಾದಾಗ ಅದರಲ್ಲಿ ಸಿಲುಕಿದ್ದ ಕನ್ನಡಿಗರನ್ನು ತಾವೇ ಸ್ವತಃ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿಕೊಂಡು ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಹಬ್ಬಾಶಗಿರಿ ಪಡೆದುಕೊಂಡಿದ್ದರು.

Advertisement

ಈ ಬಾರಿ ಧಾರವಾಡ ಜಿಲ್ಲೆಯಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತು ಸಂತೋಷ್ ಲಾಡ್ ಇಬ್ಬರಿಗೂ ಸಚಿವ ಸ್ಥಾನ ಸಿಕ್ಕುತ್ತದೆ ಎನ್ನಲಾಗಿತ್ತು. ನಂತರ ವಿನಯ್ ಹೆಸರು ಸಚಿವರ ಪಟ್ಟಿ ಸೇರಿ, ಲಾಡ್ ಹೆಸರು ಪಟ್ಟಿಯಲ್ಲಿರಲಿಲ್ಲ. ಆದರೆ ಅಂತಿಮವಾಗಿ ಲಾಡ್ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next