Advertisement
ಟೊಯೊಟೋ ಕ್ವಾಲಿಸ್ ಬರುವವರೆಗೂ ಫ್ಯಾಮಿಲಿ ಕಾರ್ ಎನ್ನುವ ಮಾದರಿ ಭಾರತದಲ್ಲಿ ಅಷ್ಟಾಗಿ ಹೆಸರೇ ಮಾಡಿರಲಿಲ್ಲ. ಇನ್ನೋವಾ ಬಂದ ಬಳಿಕವಂತೂ ಸೂಪರ್ ಹಿಟ್ ಆಗಿದ್ದು, ಈಗ ಎಲ್ಲೆಂದರಲ್ಲಿ ಓಡಾಡುತ್ತಿದೆ. ಇನ್ನೋವಾ ಕ್ರೆ„ಸ್ಟಾವಂತೂ ಈಗಲೂ ತಿಂಗಳಿಗೆ ಸುಮಾರು ಆರೂವರೆ ಸಾವಿರದಷ್ಟು ದೇಶದಲ್ಲಿ ಮಾರಾಟವಾಗುತ್ತಿದೆ. ಅದೇ ರೀತಿ ಕಡಿಮೆ ಬೆಲೆಯ ಫ್ಯಾಮಿಲಿ ಕಾರ್ ಆದ ಎರ್ಟಿಗಾ ಕೂಡ ಮೂರೂವರೆ ಸಾವಿರದಷ್ಟು ಮಾರಾಟವಾಗುತ್ತಿದೆ. ಇಂಥ ಫ್ಯಾಮಿಲಿ ಕಾರ್‌ಗಳ ಸಾಲಿಗೆ ಪೈಪೋಟಿ ನೀಡಲು ಮಹೀಂದ್ರಾ, ಅತ್ಯಾಧುನಿಕ ಫೀಚರ್‌ಗಳುಳ್ಳ ಮರಾಜೋವನ್ನು ಮಾರುಕಟ್ಟೆಗೆ ಬಿಟ್ಟಿದೆ.
ಭಾರತೀಯ ತಯಾರಿಕೆಯ ಅತಿ ಸೇಫೆಸ್ಟ್ ಕಾರ್ ಎಂಬ ಹೆಗ್ಗಳಿಕೆಯನ್ನು ಮೊದಲು ಟಾಟಾದ ನೆಕ್ಸಾನ್, ನಂತರ ಮರಾಜೋ ಪಡೆದುಕೊಂಡಿದೆ. ಗ್ಲೋಬಲ್ ಎನ್‌ಸಿಪಿಐ ಪರೀಕ್ಷೆಯಲ್ಲಿ 4 ಸ್ಟಾರ್ ರ್‍ಯಾಂಕಿಂಗ್ ಪಡೆದ ಎರಡನೇ ಕಾರು ಇದು. ಈ ಕಾರಣದಿಂದ ಜಾಗತಿಕ ಗುಣಮಟ್ಟದ ಕಾರು ತಯಾರಿಕೆಯಲ್ಲಿ ಭಾರತೀಯ ಕಾರುಗಳೂ ಪೈಪೋಟಿ ಕೊಡಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿದೆ. ಮರಾಜೋ ಕಾರು, ಟೊಯೊಟೋ ಅಥವಾ ಇನ್ನೋವಾ ಕ್ರೆ„ಸ್ಟಾದಷ್ಟು ದುಬಾರಿ ಕಾರಲ್ಲ. ಆದರೆ ಮಾರುತಿ ಸುಝುಕಿ ಎರ್ಟಿಗಾದಷ್ಟು ಕಡಿಮೆ ಬೆಲೆಯ ಕಾರು ಕೂಡ ಅಲ್ಲ. ಇವೆರಡರ ಮಧ್ಯದಲ್ಲಿ ಈ ಕಾರಿನ ಬೆಲೆಗಳಿದ್ದು, ಆಕರ್ಷಕ ಫೀಚರ್ಗಳನ್ನು ಹೊಂದಿರುವುದರಿಂದ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಮರಾಜೋ ವಿನ್ಯಾಸ
ಎಂಪಿ (ಮಲ್ಟಿ ಪರ್ಪಸ್ ವೆಹಿಕಲ್)ಗಳು ಒಂದಷ್ಟು ಬೇಡಿಕೆ ಸೃಷ್ಟಿಸಿರುವ ಈ ಸಂದರ್ಭದಲ್ಲಿ ಮಹೀಂದ್ರಾದ ಮೊದಲ ಪರಿಪೂರ್ಣ ಎಂಪಿ ಮರಾಜೋ ಕಾರು ಬಂದಿದೆ. ಭಾರತೀಯ ಮಾರುಕಟ್ಟೆಯನ್ನೇ ಗುರಿಯಾಗಿಸಿಕೊಂಡು, ಇದನ್ನು ತಯಾರಿಸಲಾಗಿದ್ದು, ಅದಕ್ಕಾಗಿಯೇ ಬೆಲೆಯನ್ನೂ ಆಕರ್ಷಕವಾಗಿರಿಸಲಾಗಿದೆ. ಮಹೀಂದ್ರಾದ ಅಮೆರಿಕದ ವಿನ್ಯಾಸ ಕೇಂದ್ರದಲ್ಲಿ ಮರಾಜೋವನ್ನು ವಿನ್ಯಾಸಗೊಳಿಸಲಾಗಿದೆ. 4585 ಎಂ.ಎಂ. ಉದ್ದ, 1866 ಎಂ.ಎಂ. ಅಗಲ ಮತ್ತು 1774 ಎಂ.ಎಂ. ಎತ್ತರ, 150 ಎಂ.ಎಂ. ಗ್ರೌಂಡ್‌ಕ್ಲಿಯರೆನ್ಸ್ ಅನ್ನು ಈ ಕಾರು ಹೊಂದಿದೆ. ಈ ಕಾರಣಕ್ಕೆ ದೊಡ್ಡ ಕಾರ್ ಆಗಿ ಇದು ರಸ್ತೆಯಲ್ಲಿ ಗೋಚರಿಸುತ್ತದೆ. ಆದರೆ ಉದ್ದದಲ್ಲಿ ಇದು ಇನ್ನೋವಾ ಕ್ರೆ„ಸ್ಟಾಕ್ಕಿಂತ ಕಡಿಮೆ ಇದ್ದು, ಮಾರುತಿ ಎರ್ಟಿಗಾಕ್ಕಿಂತ ಹೆಚ್ಚು ಉದ್ದವಿದೆ. ಶಾರ್ಕ್‌ನಿಂದ ಪ್ರೇರೇಪಿತವಾದ ವಿನ್ಯಾಸ ಎಂದು ಮಹೀಂದ್ರಾ ಹೇಳಿಕೊಂಡಿದ್ದು, ಹಿಂಭಾಗದ ವಿನ್ಯಾಸ ತುಸು ರೆನಾಲ್ಟ್ ಲಾಡ್ಜಿ ಎಂಪಿಯನ್ನು ನೆನಪಿಸುತ್ತದೆ. ಹಿಂಭಾಗದಲ್ಲಿ ದೊಡ್ಡದಾದ ಬ್ರೇಕ್‌ಲೈಟ್‌ಗಳಿವೆ. ಮುಂಭಾಗದಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಕೆಳಭಾಗದಲ್ಲಿ ಡೇ ಟೈಂ ರನ್ನಿಂಗ್ ಎಲ್‌ಇಡಿ ಲೈಟ್‌ಗಳು, ಫಾಗ್‌ಲ್ಯಾಂಪ್‌ಗ್ಳು, ಆಕರ್ಷಕ ಗ್ರಿಲ್ ಇದರ ಪ್ಲಸ್ ಪಾಯಿಂಟ್. ಈ ಕಾರಿನಲ್ಲಿ ನಾಲ್ಕು 17 ಇಂಚಿನ ದೊಡ್ಡ ಅಲಾಯ್ ವೀಲ್‌ಗಳಿದ್ದು ಆಕರ್ಷಕವಾಗಿದೆ. ಒಟ್ಟು 1650 ಕೆ.ಜಿಯಷ್ಟು ಭಾರವಿದ್ದು, ಹೈವೇ ಸವಾರಿ¿åಲ್ಲಿ ಖುಷಿ ಕೊಡುತ್ತದೆ.
Related Articles
ಮಹೀಂದ್ರಾ, ಅತ್ಯಾಧುನಿಕ ಒಳಾಂಗಣ ವಿನ್ಯಾಸಕ್ಕೆ ಮರಾಜೋದಲ್ಲಿ ಹೆಚ್ಚು ಒತ್ತು ನೀಡಿದೆ. ಸಂಪೂರ್ಣ ಬ್ಲ್ಯಾಕ್ ಡ್ಯಾಶ್‌ಬೋರ್ಡ್, ಐವರಿ ಕಲರ್‌ನ ಸೀಟುಗಳು, 7 ಇಂಚಿನ ಟಚ್ಸ್ಕ್ರೀನ್ ಇರುವ ಇನ್ಫೋ ಎಂಟರ್‌ಟೈನ್‌ಮೆಂಟ್ ವ್ಯವಸ್ಥೆ, 7 ಜನ ಕುಳಿತುಕೊಳ್ಳಬಹುದಾದಷ್ಟು ಜಾಗ, ಮುಂದಿನ ಎರಡು ಸಾಲುಗಳ ಸೀಟುಗಳಿಗೆ ಹ್ಯಾಂಡ್‌ರೆಸ್ಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಒಆರ್‌ಎಂ, ಪವರ್ ವಿಂಡೋಗಳು, ವಿಮಾನದಲ್ಲಿರುವ ರೀತಿ ಆಕರ್ಷಕ ಹ್ಯಾಂಡ್‌ಬ್ರೇಕ್, ಉತ್ತಮ ಸಾಮರ್ಥ್ಯದ ಸ್ಪೀಕರ್‌ಗಳು, ಹಿಂಭಾಗದ ಎಲ್ಲ ಸೀಟುಗಳಿಗೆ ಉತ್ತಮ ಟಾಪ್ ಎ.ಸಿ. ವ್ಯವಸ್ಥೆ, ನಿಯಂತ್ರಣ ಸೌಕರ್ಯಗಳು, ಎಲ್ಲ ಸೀಟುಗಳನ್ನು ಮಡಚಿ ಸಲಕರಣೆಗಳನ್ನು ಇಡಬಹುದಾದ ಸೌಲಭ್ಯ ಇದರಲ್ಲಿದೆ. 190ರಿಂದ 1055 ಲೀಟರ್‌ವರೆಗೆ ಬೂಟ್ ಕೆಪಾಸಿಟಿ ಇರುವುದು, ಸಾಕಷ್ಟು ಅನುಕೂಲಕರವಾಗಿದೆ.
Advertisement
ಪವರ್‌ಫುಲ್ ಎಂಜಿನ್ಡೀಸೆಲ್ ಆವೃತ್ತಿಯಲ್ಲಿ ಮರಾಜೋ ಲಭ್ಯವಿದ್ದು, 1497 ಸಿಸಿ, 4 ಸಿಲಿಂಡರ್‌ನ ಟರ್ಬೋ ಎಂಜಿನ್ ಹೊಂದಿದೆ. ಒಟ್ಟು 123 ಬಿಎಚ್ಪಿ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 6 ಗಿಯರ್‌ಗಳನ್ನು ಹೊಂದಿದೆ. ಹಾಗೆಯೇ 1750-2500 ಆರ್‌ಪಿಎಂನಲ್ಲಿ 300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಆದ್ದರಿಂದ ನಗರ, ಕಚ್ಚಾ ರಸ್ತೆಗಳಲ್ಲೂ ಹೆಚ್ಚು ಗಿಯರ್ ಚೇಂಜ್ ಮಾಡದೇ ಆರಾಮದಾಯಕ ಸವಾರಿ ಸಾಧ್ಯ. ಫ್ರಂಟ್ ವೀಲ್ ಡ್ರೆ„ವ್ ವ್ಯವಸ್ಥೆ ಇರುವ ಈ ವಾಹನದಲ್ಲಿ ಸದ್ಯ ಮ್ಯಾನುವಲ್ ಗಿಯರ್ ಆಪ್ಷನ್ ಮಾತ್ರ ನೀಡಲಾಗಿದೆ. ಪಾರ್ಕಿಂಗ್ ಸೆನ್ಸರ್ ಮತ್ತು ಕ್ಯಾಮೆರಾ, ಸ್ಯಾಟಲೈಟ್ ನ್ಯಾವಿಗೇಷನ್ ಇದರಲ್ಲಿದೆ. ಮುಂಭಾಗ ಮತ್ತು ಹಿಂಭಾಗ ಎರಡರಲ್ಲೂ ಡಿಸ್ಕ್ ಮತ್ತು ಬೇಸಿಕ್ ವೇರಿಯೆಂಟ್‌ನಲ್ಲೂ 2 ಏರ್‌ಬ್ಯಾಗ್ ಮತ್ತು ಎಬಿಎಸ್-ಇಬಿಡಿ ಸುರಕ್ಷತಾ ವ್ಯವಸ್ಥೆ ನೀಡಿರುವುದು ಈ ವಾಹನದ ಪ್ಲಸ್‌ಪಾಯಿಂಟ್. ಸಾಕಷ್ಟು ಗಟ್ಟಿಮುಟ್ಟಾಗಿರುವ ಈ ವಾಹನ, ಗರಿಷ್ಠ 75 ಕಿ.ಮೀ.ವರೆಗೆ ವೇಗ ತಲುಪಬಲ್ಲದು. ಜೊತೆಗೆ 45 ಲೀಟರ್‌ನಷ್ಟು ಡೀಸೆಲ್ ಟ್ಯಾಂಕ್ ಇದ್ದು ದೂರದ ಸವಾರಿಗೆ ಯೋಗ್ಯವಾಗಿದೆ. ದರ, ಮೈಲೇಜ್
ಎಆರ್‌ಎಐ ಪ್ರಕಾರ ಮರಾಜೋ 17 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ. ಇದು ನಗರದಲ್ಲಿ ಸುಮಾರು 12 ಕಿ.ಮೀ.ವರೆಗೆ ಮೈಲೇಜ್ ಕೊಡಬಲ್ಲದು. ಈ ನಿಟ್ಟಿನಲ್ಲಿ ಇದು ಉತ್ತಮ ಮೈಲೇಜ್ ಎಂದೇ ಹೇಳಬೇಕಾಗುತ್ತದೆ. ಆದರೂ 15 ಕಿ.ಮೀ.ಗೆ ಅಡ್ಡಿಯಾಗಲಾರದು. 9.99 ಲಕ್ಷ ರೂ.ಗಳಿಂದ 13.90 ಲಕ್ಷ ರೂ.ಗಳ ವರೆಗೆ ಇದರ ದರವಿದ್ದು, ಎಂಪಿ ಮಾದರಿಯಲ್ಲಿ ಸ್ಪರ್ಧಾತ್ಮಕ ದರ ಹೊಂದಿದೆ. ಅಷ್ಟೇ ಅಲ್ಲದೆ, 3 ವರ್ಷ ಅನ್‌ಲಿಮಿಟೆಡ್ ಕಿ.ಮೀ.ವಾರೆಂಟಿ ಇದರಲ್ಲಿದ್ದು, ಮಾಲೀಕರಿಗೆ ತಲೆನೋವಿಲ್ಲದೆ ಓಡಿಸುವ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಮಹೀಂದ್ರಾ ಮಾರುಕಟ್ಟೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯಲು ಯೋಜನೆ ರೂಪಿಸಿದೆ. ∙ಈಶ