Advertisement

ಮರಡಿ ಬಸವೇಶ್ವರ ಮಹಾರಥೋತ್ಸವ

06:13 PM Nov 23, 2021 | Team Udayavani |

ಬೈಲಹೊಂಗಲ: ಉತ್ತರ ಕರ್ನಾಟಕದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದಾದ ಪಟ್ಟಣದ ಇತಿಹಾಸ ಪ್ರಸಿದ್ದ ಮರಡಿ ಬಸವೇಶ್ವರ ದೇವಸ್ಥಾನದ ಮಹಾರಥೋತ್ಸವ 50 ಸಾವಿರಕ್ಕೂ ಅಧಿಕ ಭಕ್ತ ಸಮೂಹ ಮಧ್ಯೆ ಸೋಮವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.

Advertisement

ಪಟ್ಟಣದ ಜವಳಿ ಕೂಟದಿಂದ ಹರ, ಹರ ಮಹಾದೇವ, ಬಸವೇಶ್ವರ ಮಹಾರಾಜಕೀ ಜೈ ಎಂಬ ಜಯ ಘೋಷಗಳೊಂದಿಗೆ ಆರಂಭವಾದ 80 ಅಡಿ ಎತ್ತರದ ಮಹಾರಥೋತ್ಸವ ಬಜಾರ ರಸ್ತೆ, ಬೆಲ್ಲದ ಕೂಟ, ಉಪ್ಪಿನ ಕೂಟ ನಂತರ ಮೇದಾರ ಗಲ್ಲಿ ಮಾರ್ಗವಾಗಿ 2 ಕೀ.ಮೀ. ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪಿತು. ದಾರಿಯುದ್ದಕ್ಕೂ ಭಕ್ತ ಸಮೂಹ ತುಂಬಿ ತುಳುಕುತ್ತಿತ್ತು. ಕರೊನಾ ಹಾವಳಿ ಇಳಿಮುಖವಾಗಿದ್ದರಿಂದ ಜಾತ್ರೆಯ ವೈಭವ ಇಮ್ಮಡಿಸಿತ್ತು.

ಬಸವೇಶ್ವರರು, ಮಹಾನ್‌ ಪುರುಷರ ಭಾವಚಿತ್ರ, ತೆಂಗು, ಬಾಳೆ, ಕಬ್ಬು, ಕೇಸರಿ, ಬಿಳಿ ಧ್ವಜ, ರುದ್ರಾಕ್ಷಿ, ಶೆಂಗಾ, ಹತ್ತಿ, ಬಣ್ಣದ ಹಾಳೆ, ವಿವಿಧ ಪುಷ್ಪಮಾಲೆ, ಮುತ್ತಿನ ಹಾರದಿಂದ ರಥವು ಕಂಗೊಳಿಸುತ್ತಿತ್ತು. ರಥೋತ್ಸವಕ್ಕೆ ಭಕ್ತರು ಶ್ರದ್ಧೆ, ಭಕ್ತಿಯಿಂದ ಕೈ ಮುಗಿದು ಹೂವು, ಬಾಳೆಹಣ್ಣು, ಖಾರೀಕ್‌ ಸಮರ್ಪಿಸಿದರು. ರಥೋತ್ಸವ ಸಾಗಿದ ಮಾರ್ಗದಲ್ಲಿ ಭಕ್ತರು ನೀರುಣಿಸಿ ಗೌರವ ಸಲ್ಲಿಸಿದರು. ರಥದಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿ ಮೂರ್ತಿಗಳು, ಶರಣರ ವಚನಗಳನ್ನು
ಇರಿಸಲಾಗಿತ್ತು.

ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದ ದೇವಸ್ಥಾನಕ್ಕೆ ಬಂದ ಅಪಾರ ಸಂಖ್ಯೆಯ ಭಕ್ತರು ಬೆಳಗ್ಗೆಯಿಂದ ರಾತ್ರಿಯವರಿಗೆ ದೇವಸ್ಥಾನಕ್ಕೆ ತೆರಳಿ ಶ್ರೀ  ಮರಡಿಬಸವೇಶ್ವರರ ದರ್ಶನ ಪಡೆದುಕೊಂಡರು. ಗಾಳಿಮರಡಿ ಕುಟುಂಬದ ಅರ್ಚಕರಾದ ರುದ್ರಯ್ಯ, ಶಿವಲಿಂಗಯ್ಯ ಪೂಜಾ ವಿಧಿ ವಿಧಾನ ನಡೆಸಿದರು. ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಶಿವಲಿಂಗ ದೇವರು, ವೇದಮೂರ್ತಿ ವಿಶ್ವನಾಥ ಹಿರೇಮಠ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಮಹಾಂತೇಶ ಮೆಟಗುಡ್ಡ ಕುಟುಂಬಸ್ಥರು ಪದ್ಧತಿಯಂತೆ ಪೂಜೆ ಸಲ್ಲಿಸಿದರು. ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸಣ್ಣಬಸಪ್ಪ ಕುಡಸೋಮಣ್ಣವರ, ಗುರುಪುತ್ರಪ್ಪ ಹೊಸಮನಿ, ಜಗದೀಶ ಕೋತಂಬ್ರಿ, ಶಿವಪುತ್ರಪ್ಪ ತಟವಟಿ, ಶಂಕರೆಪ್ಪ ತುರಮರಿ, ಶಂಕರೆಪ್ಪ ಯಡಳ್ಳಿ, ಮಹಾಂತೇಶ ಅಕ್ಕಿ, ಮಹಾಂತೇಶ ಹೊಸಮನಿ, ಮಹೇಶ ಹರಕುಣಿ ಈಶ್ವರ ಕೊಪ್ಪದ, ಸುಭಾಷ ತುರಮರಿ,
ವೀರುಪಾಕ್ಷ ವಾಲಿ, ಅಜ್ಜಪ್ಪ ಹೊಸೂರ, ಮಹಾಂತೇಶ ತೋಟಗಿ, ಶಿವಾನಂದ ಇಂಚಲ, ಮಲ್ಲಿಕಾರ್ಜುನ ಕಮತಗಿ, ಬಸವರಾಜ ಇಂಚಲ, ರವಿ ಲಕ್ಕನ್ನವರ, ಬಸವರಾಜ ಜವಳಿ, ಬಾಬುಸಾಬ ಸುತಗಟ್ಟಿ ಸೇರಿದಂತೆ ಸಹಸ್ರಾರು ಜನ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೆನಹಳ್ಳಿ ನೇತೃತ್ವದಲ್ಲಿ ಬೈಲಹೊಂಗಲ: ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. 50 ಸಿಬ್ಬಂದಿ ಬಿಗಿ ಪೊಲೀಸ್‌ ಬಂದೊಬಸ್ತಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next